ಬಂಟ್ವಾಳ, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಪಲ್ಲಮಜಲು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲಿನ ಕೋರೆಯು ಸಾರ್ವಜನಿಕರ ದೂರಿನ ಮೇರೆಗೆ ಇತ್ತೀಚೆಗೆ ನಿಂತಿದ್ದು, ಇದೀಗ ಮತ್ತೆ ಅಕ್ಟೋಬರ್ 16 ರಂದು ಪುನಃ ಪ್ರಾರಂಭಗೊಂಡಿದೆ.
ಇಲ್ಲಿ ಸ್ಫೋಟಕ ಸುಡುಮದ್ದುಗಳನ್ನು ಬಳಸುತ್ತಿರುವುದರಿಂದ ಸುತ್ತಲಿನ ಮನೆಗಳಿಗೆ ನಿರಂತರವಾಗಿ ಹಾನಿಯಾಗುತ್ತಲೇ ಇದೆ. ಇದರಿಂದ ಅನ್ಯಾಯಕ್ಕೊಳಗಾಗಿರುವ ಸುತ್ತಲಿನ ಪರಿಸರದ ಜನರು ಶುಕ್ರವಾರ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರಿಗೆ ಈ ಅಕ್ರಮ ಕೋರೆಯ ವಿರುದ್ದ ದೂರು ನೀಡಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ಪರಿಸರದ ಎಲ್ಲಾ ಮನೆಗಳಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಅನ್ಯಾಯವಾಗದಂತೆ ಮುಂದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಗಣಿ ಇಲಾಖೆಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.



























0 comments:
Post a Comment