ಬಂಟ್ವಾಳ, ಅಕ್ಟೋಬರ್ 23, 2025 (ಕರಾವಳಿ ಟೈಮ್ಸ್) : ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಇನ್ನೊಂದು ಬೈಕ್ ಸವಾರ ಓವರ್ ಟೇಕ್ ಮಾಡುವ ಭರದಲ್ಲಿ ಕೆಸರು ನೀರು ಎರಚಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ಕೂಟರ್ ಸವಾರಗೆ ಹಲ್ಲೆ ನಡೆಸಿದ ಘಟನೆ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಅ 21 ರಂದು ರಾತ್ರಿ ವೇಳೆ ಸಂಭವಿಸಿದೆ.
ಈ ಬಗ್ಗೆ ಬೋಳಂತೂರು ಗ್ರಾಮದ ದಂಡೆಮಾರ್ ಫಾತಿಮ ಮಂಝಿಲ್ ನಿವಾಸಿ ಯಾಕೂಬ್ ಎಂಬವರ ಪುತ್ರ ಅಬ್ದುಲ್ ಸಮದ್ (22) ಎಂಬವರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಇವರು ಬಾರೆಬೆಟ್ಟು ನಿವಾಸಿ ಸಿಯಾಬ್ ಎಂಬಾತನೊಂದಿಗೆ ಅ 21 ರಂದು ರಾತ್ರಿ 8 ಗಂಟೆ ವೇಳೆಗೆ ಕಲ್ಲಡ್ಕದ ಜಿಮ್ ಗೆ ತೆರಳಿ, ಜಿಮ್ ಮುಗಿಸಿ ರಾತ್ರಿ ಸುಮಾರು 10 ಗಂಟೆಗೆ ತಿಂಡಿ ತಿನ್ನಲು ಸಿಯಾಬ್ ಜೊತೆ ಸ್ಕೂಟರಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಕಲ್ಲಡ್ಕದ ಸರ್ವಿಸ್ ರಸ್ತೆಯ ಎಡಗಡೆಯಿಂದ ಹೊಟೇಲ್ ಸಮುದ್ರಕ್ಕೆ ಹೋಗುತ್ತಾ ರಾತ್ರಿ ಸುಮಾರು 10.05 ರ ವೇಳೆಗೆ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿಗೆ ತಲುಪಿದಾಗ, ಹಿಂದುಗಡೆಯಿಂದ ಬೈಕಿನಲ್ಲಿ ಬಂದ ವ್ಯಕ್ತಿಯು, ಬಲಗಡೆಯಿಂದ ಬೈಕನ್ನು ಓವರ್ ಟೇಕ್ ಮಾಡಿ ಹೋಗುವಾಗ ರಸ್ತೆಯಲ್ಲಿದ್ದ ಕೆಸರು ನೀರು ಸಮದ್ ಅವರ ಮೇಲೆ ರಟ್ಟಿದ್ದು, ಅದಕ್ಕೆ ಅವರು ಬೈಕ್ ಸವಾರನನ್ನುಉದ್ದೇಶಿಸಿ, ಸ್ವಲ್ಪ ಮೆಲ್ಲ ಹೋಗು ಯಾಕೆ ನೀರು ರಟ್ಟಿಸುತ್ತೀಯ’ ಎಂದು ಕೇಳಿದಾಗ ಬೈಕ್ ಸವಾರ ಸಮದ್ ಇದ್ದ ಸ್ಕೂಟರ್ ಮುಂದಕ್ಕೆ ಹೋಗದಂತೆ ಬೈಕನ್ನು ಅಡ್ಡವಾಗಿ ನಿಲ್ಲಿಸಿ, ಬೈಕಿನಿಂದ ಇಳಿದು ಲೈಟ್ ಬೆಳಗಿಸಿ, ಎಲ್ಲಿ ಕೆಸರು ನೀರು ರಟ್ಟಿದೆ? ನೀನು ಸುಳ್ಳು ಹೇಳುತ್ತೀಯಾ ಎಂದು ಹೇಳಿ ಆತನ ಮೊಬೈಲಿನಲ್ಲಿ ಯತಿನ್ ಎಂಬಾತನಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾನೆ. ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಬಂದ ವ್ಯಕ್ತಿಯಲ್ಲಿ, ತುಳು ಭಾಷೆಯಲ್ಲಿ ಸಮದನನ್ನುದ್ದೇಶಿಸಿ, ಇವನನ್ನು ಸುಮ್ಮನೆ ಬಿಡಬಾರದು ಎಂದು ಹೇಳಿ, ಬೈಕ್ ಸವಾರನು ಸಮದನ ಕೈಯನ್ನು ಗಟ್ಟಿಯಾಗಿ ಹಿಂದಕ್ಕೆ ಮಡಚಿ ಹಿಡಿದಾಗ ಯತಿನ್ ಎಂಬಾತನು ಆತನ ಕೈಯಲ್ಲಿದ್ದ ಕಡಗದಿಂದ ತಲೆಯ ಎಡಭಾಗಕ್ಕೆ ಜೋರಾಗಿ ಹೊಡೆದಿದ್ದುದಲ್ಲದೇ ಯತೀಶನು ಕುತ್ತಿಗೆಯನ್ನು ಜೋರಾಗಿ ಒತ್ತಿ ಹಿಡಿದು, ಬಲಭುಜಕ್ಕೆ ಕೈಯಲ್ಲಿದ್ದ ಕಡಗದಿಂದ ಹೊಡೆದಾಗ ಸಮದ್ ನೆಲಕ್ಕೆ ಬಿದ್ದಿದ್ದಾನೆ. ಆಗ ಬೈಕ್ ಸವಾರನು ಸಮದನಿಗೆ ಕಾಲಿನಿಂದ ತುಳಿದಾಗ ಸಮದ್ ನೋವಿ£ಂದ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಆಗ ಸಮದ್ ಜೊತೆಗಿದ್ದ ಶಿಯಾಬ್ ಆತನನ್ನು ರಕ್ಷಿಸಿದ್ದು, ಸಮದನ ಬೊಬ್ಬೆ ಕೇಳಿ ಸಮುದ್ರ ಹೊಟೇಲ್ ಕಡೆಯಿಂದ ಕೆಲವರು ಸ್ಥಳಕ್ಕೆ ಓಡಿ ಬರುವುದನ್ನು ನೋಡಿದ ಬೈಕ್ ಸವಾರ ಮತ್ತು ಯತಿನ್ ಸಮದನನ್ನುದ್ದೇಶಿಸಿ ಈಗ ನೀನು ಬದುಕಿದ್ದಿ, ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಬೈಕಿನಲ್ಲಿ ಹೋಗಿದ್ದಾರೆ. ಸಮದ್ ಆರೋಪಿತರನ್ನು ಹಾಗೂ ಬೈಕನ್ನು ಬೀದಿ ದೀಪದ ಬೆಳಕಿನಿಂದ ನೋಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2025, ಕಲಂ 126(1), 351(2), 115(2), 118(1), 352, 109 ಜೊತೆಗೆ 3(5) ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಾಗಿದೆ.

















0 comments:
Post a Comment