ಮಂಗಳೂರು, ಅಕ್ಟೋಬರ್ 23, 2025 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕೆ.ಪಿ.ಟಿ.ಯಿಂದ ಏರ್ ಪೋರ್ಟ್ ವರೆಗೆ ಬೀದಿ ಬದಿ ವ್ಯಾಪಾರಮುಕ್ತ ವಲಯ ಎಂದು ಈಗಾಗಲೇ ಘೋಷಿಸಲಾಗಿದೆ. ಆದುದರಿಂದ ಕೆ.ಪಿ.ಟಿಯಿಂದ ಏರ್ ಪೋರ್ಟ್ ತನಕದ ರಸ್ತೆಯ ಎರಡೂ ಬದಿಯ ಫುಟ್ ಪಾತ್‍ಗಳಲ್ಲಿ ಯಾವುದೇ ಬೀದಿ ಬದಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರ ಮಾಡುವುದು ಕಂಡುಬಂದರೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನಿರ್ದಾಕ್ಷಿಣ್ಯವಾಗಿ ತೆರವು ಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಕದ್ರಿ ವಲಯ ಆಯುಕ್ತರು ತಿಳಿಸಿದ್ದಾರೆ.
23 October 2025
- Blogger Comments
- Facebook Comments
Subscribe to:
Post Comments (Atom)
















0 comments:
Post a Comment