ಮಂಗಳೂರು, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ಕಳೆದ 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾವೂರು-ಮರಕಡ ಜ್ಯೋತಿನಗರ ನಿವಾಸಿ ಮುನಿಯಾಂಡಿ ಎಂಬವರ ಪುತ್ರ ಧರ್ಮರಾಜ (60) ಎಂದು ಹೆಸರಿಸಲಾಗಿದೆ. ಮಂಗಳೂರು ಕಾವೂರು ಪೆÇಲೀಸ್ ಠಾಣಾ ಅಪರಾ ಕ್ರಮಾಂಕ 143/2088, ಕಲಂ 325 ಐ.ಪಿ.ಸಿ, ನ್ಯಾಯಾಲಯದ ಎಲ್.ಪಿ.ಸಿ ನಂಬ್ರ 12/2018 ಮತ್ತು ಸಿ.ಸಿ ನಂಬ್ರ 84/2013 ಪ್ರಕರಣದ ಆರೋಪಿಯಾಗಿರುವ ಈತ 2018 ರಿಂದ ಸುಮಾರು 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆರೋಪಿಗೆ ನ್ಯಾಯಾಲಯವು ಎಲ್.ಪಿ.ಸಿ ವಾರೆಂಟ್ ಹೊರಡಿಸಿತ್ತು.
ಆರೋಪಿಯನ್ನು ಕಾವೂರು ಪೆÇಲೀಸ್ ಠಾಣೆಯ ಎ.ಎಸ್.ಐ ಚಂದ್ರಹಾಸ್ ಸನೀಲ್, ಎಚ್.ಸಿ ಬಾಲಕೃಷ್ಣ ಹಾಗೂ ಪಿ.ಸಿ ಚಂದ್ರಶೇಖರಪ್ಪ ಅವರುಗಳು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಮುಲ್ಕಿ-ಪಕ್ಷಿಕರೆಯ ಕೆಂಬ್ರಾಳ್ ಎಂಬಲ್ಲಿಂದ ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು 1ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ಅ 29ರವರೆಗೆ ನ್ಯಾಯಾಂಗ ಬಂದನ ವಿಧಿಸಲಾಗಿದೆ.

















0 comments:
Post a Comment