ಬಂಟ್ವಾಳ, ಅಕ್ಟೋಬರ್ 16, 2025 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂದಿಸಿದಂತೆ ಅಪ್ರಾಪ್ತ ಪ್ರಾಯದ ಬಾಲಕನಿಗೆ ಬೈಕ್ ಚಲಾವಣೆಗೆ ಅವಕಾಶ ಕೊಟ್ಟ ವಾಹನದ ಆರ್ ಸಿ ಮಾಲಕಗೆ ನ್ಯಾಯಾಲಯ ಭಾರೀ ದಂಡ ವಿಧಿಸಿದೆ.
ಕೆಎ19 ಎಸ್9666 ನೋಂದಣಿ ಸಂಖ್ಯೆಯ ಬೈಕನ್ನು ಚಲಾಯಿಸಿ ಅಪಾಘಾತಪಡಿಸಿದ ಬಗ್ಗೆ ಬಂಟ್ವಾಳ ಎಸಿಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಸಿಸಿ ನಂಬ್ರ 1766/2025 ರಂತೆ ವಿಚಾರಣೆ ನಡೆಸಿ ಸೆ 26 ರಂದು ಆರೋಪಿ ವಾಹನದ ಆರ್ ಸಿ ಮಾಲಕ ಮಹಮ್ಮದ್ ಅನೀಸ್ ಅವರಿಗೆ 32 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.














0 comments:
Post a Comment