ಮಂಗಳೂರು, ಅಕ್ಟೋಬರ್ 16, 2025 (ಕರಾವಳಿ ಟೈಮ್ಸ್) : ಕದ್ದುಕೊಂಡು ಬಂದ ಜಾನುವಾರುಗಳನ್ನು ಮಾಂಸ ಮಾಡುವ ಸಿದ್ದತೆಯಲ್ಲಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಕೋಣಗಳನ್ನು ಪತ್ತೆ ಹಚ್ಚಿದ ಘಟನೆ ತಲಪಾಡಿ ಗ್ರಾಮದ ಕೆ ಸಿ ರೋಡು ಸಮೀಪದ ಕೆ ಸಿ ನಗರ ಮರದ ಡಿಪ್ಪೋ ಬಳಿ ಅ 14 ರಂದು ರಾತ್ರಿ ನಡೆದಿದೆ.
ಕೆ ಸಿ ನಗರದ ಮರದ ಡಿಪ್ಪೋ ಬಳಿ ಇರುವ ಹೊಸದಾಗಿ ನಿರ್ಮಾಣ ಆಗುತ್ತಿರುವ ಮನೆಯ ಬಳಿ ಖಾಲಿ ಜಾಗದಲ್ಲಿ ಯಾರೋ ಎಲ್ಲಿಂದಲೋ ಕದ್ದುಕೊಂಡು ಬಂದ ಸುಮಾರು 4-5 ವರ್ಷ ಪ್ರಾಯದ ಕಪ್ಪು ಮತ್ತು ಕಂದು ಮಿಶ್ರಿತ ಬಣ್ಣದ 3 ಕೋಣಗಳನ್ನು ಮಾಂಸ ಮಾಡಿ ಮಾರಾಟ ಮಾಡಲು ಸಿದ್ದತೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸ್ ಠಾಣಾ ಎಎಸ್ಸೈ ಸುನ್ ಶೆಟ್ಟಿ, ಸಿಬ್ಬಂದಿಗಳಾದ ಇಸಾಕ್ ಹಾಗೂ ಅಕ್ಬರ್ ಅವರುಗಳ ತಂಡ ಸ್ಥಳದಲ್ಲಿ 3 ಕೋಣಗಳನ್ನು ಪತ್ತೆ ಮಾಡಿದ್ದಾರೆ. ವಶಪಡಿಸಿಕೊಂಡ ಕೋಣಗಳ ಒಟ್ಟು ಮೌಲ್ಯ 95 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.














0 comments:
Post a Comment