ಬಂಟ್ವಾಳ, ಅಕ್ಟೋಬರ್ 25, 2025 (ಕರಾವಳಿ ಟೈಮ್ಸ್) : ಮಕ್ಕಳ ಮನಸ್ಸಿನ ಒತ್ತಡಗಳು, ಅಂಕ ನಿರ್ಧಾರಿತ ಶಿಕ್ಷಣ ವ್ಯವಸ್ಥೆ, ಆತ್ಮವಿಶ್ವಾಸದ ಕೊರತೆ, ಇಂದಿನ ಸ್ಪರ್ಧಾ ಕಾಲ ಘಟ್ಟದಲ್ಲಿ ಎದುರಿಸಬಹುದಾದ ಕೀಳರಿಮೆ ಮನೋಭಾವ ಇವುಗಳ ಜೊತೆ ಇನ್ನೂ ಅನೇಕ ವಿಷಯಗಳು ಇಂದಿನ ಮಕ್ಕಳ ಕಲಿಕಾ ಮತ್ತು ಮಾನಸಿಕ ಒತ್ತಡಗಳಿಗೆ ಕಾರಣಗಳಾಗಿವೆ. ಇದರ ಸಲುವಾಗಿ ಮಂಚಿಯ ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ “ಮಾನಸಿಕ ಸ್ವಾಸ್ಥ್ಯ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವು” ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಅ 25 ರಂದು ನಡೆಯಿತು.
ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಉಮಾನಾಥ ರೈ ಮೇರಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಲಯನ್ ಡಾ ಗೋಪಾಲ್ ಆಚಾರ್ ಮಂಚಿ ಉದ್ಘಾಟಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿಟ್ಟೆ ವಿದ್ಯಾ ಸಂಸ್ಥೆಯ ಮಾನಸಿಕ ಆರೋಗ್ಯ ಸುಶ್ರೂಶ ವಿಭಾಗದ ಸಹಾಯಕ ಪೆÇ್ರಫೆಸರ್ ಸುಕೇಶ್ ಶೆಟ್ಟಿ ಕಾರ್ಯಗಾರ ನಡೆಸಿಕೊಟ್ಟರು. ಮಂಚಿ ಕೊಳ್ನಾಡು ಪ್ರೌಢಶಾಲೆಯ ಸುಮಾರು 280 ವಿದ್ಯಾರ್ಥಿಗಳು ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.
ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಕೋಶಾಧಿಕಾರಿ ಲಯನ್ ನಿಶ್ಚಲ್ ಜಿ ಶೆಟ್ಟಿ ಕಲ್ಲಾಡಿ, ಲಯನ್ ಜಿಲ್ಲಾ ಸಲಹೆಗಾರ ಲಯನ್ ಮನೋರಂಜನ್ ಕೆ ಆರ್, ಸೇವಾ ವಿಭಾಗದ ಸಂಯೋಜಕ ಲಯನ್ ಜಯಪ್ರಕಾಶ್ ರೈ ಮೇರಾವು, ಲಯನ್ ದಿವಾಕರ ಶೆಟ್ಟಿ, ಲಯನ್ ರಾಜಲಕ್ಷ್ಮಿ ಮನೋರಂಜನ್ ಭಾಗವಹಿಸಿದರು.
ಮಂಚಿ-ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ ಸ್ವಾಗತಿಸಿ, ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು.


















0 comments:
Post a Comment