ಅಶೋಕ ಜನಮನ ಕಾರ್ಯಕ್ರಮದ ಕೊನೆಯಲ್ಲಿ ಗೊಂದಲ, ಅಸ್ತವ್ಯಸ್ತತೆ, ಅಸ್ವಸ್ಥಗೊಂಡ ಜನ : ಅವ್ಯವಸ್ಥೆಗಾಗಿ ಕ್ಷಮೆ ಕೋರಿದ ಶಾಸಕ ಅಶೋಕ್ ರೈ - Karavali Times ಅಶೋಕ ಜನಮನ ಕಾರ್ಯಕ್ರಮದ ಕೊನೆಯಲ್ಲಿ ಗೊಂದಲ, ಅಸ್ತವ್ಯಸ್ತತೆ, ಅಸ್ವಸ್ಥಗೊಂಡ ಜನ : ಅವ್ಯವಸ್ಥೆಗಾಗಿ ಕ್ಷಮೆ ಕೋರಿದ ಶಾಸಕ ಅಶೋಕ್ ರೈ - Karavali Times

728x90

20 October 2025

ಅಶೋಕ ಜನಮನ ಕಾರ್ಯಕ್ರಮದ ಕೊನೆಯಲ್ಲಿ ಗೊಂದಲ, ಅಸ್ತವ್ಯಸ್ತತೆ, ಅಸ್ವಸ್ಥಗೊಂಡ ಜನ : ಅವ್ಯವಸ್ಥೆಗಾಗಿ ಕ್ಷಮೆ ಕೋರಿದ ಶಾಸಕ ಅಶೋಕ್ ರೈ

ಪುತ್ತೂರು, ಅಕ್ಟೋಬರ್ 20, 2025 (ಕರಾವಳಿ ಟೈಮ್ಸ್) : ತಾಲೂಕಿನ ಕೊಂಬೆಟ್ಟು ಮೈದಾನದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದ ಕೊನೆಯಲ್ಲಿ ಭಾರೀ ಅಸ್ತವ್ಯಸ್ತತೆ ಹಾಗೂ ಗೊಂದಲದ ಪರಿಸ್ಥಿತಿ ಉಂಟಾದ ಬಗ್ಗೆ ವರದಿಯಾಗಿದೆ. 

ಸಿಎಂ ಆಗಮನ ವಿಳಂಬ ಹಾಗೂ ಆಹಾರ ಮತ್ತು ಗಿಫ್ಟ್ ನೀಡುವಲ್ಲಿ ಆಗಿರುವ ವಿಳಂಬವಾಗಿ ನೂಕು ನುಗ್ಗಲು ಹಾಗೂ ಜನ ಹಸಿವು ಬಾಯಾರಿಕೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹೈಪೆÇಗ್ಲೇಸಮೀಯ ಅಥವಾ ಡಿಹೈಡ್ರೇಷನ್ ಉಂಟಾಗಿದೆ. 3 ಮಂದಿ ಮಹಿಳೆಯರಿಗೆ ಐ.ವಿ. ಫ್ಲೂಯಿಡ್ಸ್ ನೀಡಲಾಗಿದ್ದು 7 ಜನ ಮಹಿಳೆಯರು ಈಗಾಗಲೇ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುತ್ತಾರೆ.

ಸೇರಿದ್ದ ಜನರಿಗೆ ದೇಹ ನಿರ್ಜಲೀಕರಣಗೊಂಡ ಕಾರಣ ಕೆಲವು ಜನರು ಅಸ್ವಸ್ಥಗೊಂಡಿದ್ದು  ಅವರನ್ನು ಅದೇ ಸ್ಥಳದಲ್ಲಿ  ಚಿಕಿತ್ಸೆಗೆ ಒಳಪಡಿಸಿದ ನಂತರ ಗುಣಮುಖರಾಗಿ ಮನೆಗೆ ತೆರಳಿರುತ್ತಾರೆ.  

ಆಸ್ಪತ್ರೆಯಲ್ಲಿ  13 ಜನ ಹೊರರೋಗಿಯಾಗಿ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ. ಪ್ರಸ್ತುತ ಎಲ್ಲರೂ ಚೇತರಿಸಿಕೊಂಡಿರುತ್ತಾರೆ ಯಾರಿಗೂ ಯಾವುದೇ ರೀತಿಯ ತೀವ್ರ ತರ ತೊಂದರೆಗಳು ಉಂಟಾಗಿರುವುದಿಲ್ಲ. ಈ ಬಗ್ಗೆ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದವರಿಂದ ವೀಡಿಯೊ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ. 

ಈ ಮಧ್ಯೆ ಅಶೋಕ ಜನಮನ ಕಾರ್ಯಕ್ರಮದಲ್ಲಿ ಉಂಟಾಗಿರುವ ಗೊಂದಲ ಹಾಗೂ ಜನರ ಅಸ್ವಸ್ಥತೆ ಬಗ್ಗೆ ಶಾಸಕ ಅಶೋಕ್ ರೈ ಜನರ ಕ್ಷಮೆ ಕೋರಿದ್ದಾರೆ. ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ಸಿಲುಕಿ ಕೆಲವು ಮಂದಿ ಅಸ್ವಸ್ಥಗೊಂಡಿದ್ದು ಈ ಘಟನೆಗೆ ನಾನು ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುವುದಾಗಿ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ನಾವು £ರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿದ ಹಾಗೂ ಮಧ್ಯಾಹ್ನದ ವೇಳೆ ಗಾಳಿ ಮಳೆ ಬಂದ ಕಾರಣ ಜನರ ನಡುವೆ ಸಿಲುಕಿ ಏಳೆಂಟು ಮಂದಿ ಅಸ್ವಸ್ಥರಾಗಿದ್ದರು. ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದ್ದರೂ ಜನಸಂದಣಿ ಹೆಚ್ಚಾದ ಕಾರಣ ಸ್ವಲ್ಪ ವ್ಯತ್ಯಾಸ ಉಂಟಾಗಿದೆ. ಈ ವೇಳೆ ಕೆಲವರ ಮನಸ್ಸಿಗೆ ನೋವಾಗಿದೆ, ಬೇಸರವಾಗಿದೆ ಇದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಕಾರ್ಯಕ್ರಮಕ್ಕೆ ಬಂದವರಲ್ಲಿ ಯಾರ ಮನಸ್ಸಿಗೂ ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ. ಸಂಜೆ ಬಳಿಕ ರಾತ್ರಿ 9.30 ರವರೆಗೂ ಉಡುಗೊರೆ ವಿತರಣೆ ನಡೆದಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಆಗಿರುವ ಘಟನೆಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದು ಶಾಸಕ ರೈ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಶೋಕ ಜನಮನ ಕಾರ್ಯಕ್ರಮದ ಕೊನೆಯಲ್ಲಿ ಗೊಂದಲ, ಅಸ್ತವ್ಯಸ್ತತೆ, ಅಸ್ವಸ್ಥಗೊಂಡ ಜನ : ಅವ್ಯವಸ್ಥೆಗಾಗಿ ಕ್ಷಮೆ ಕೋರಿದ ಶಾಸಕ ಅಶೋಕ್ ರೈ Rating: 5 Reviewed By: karavali Times
Scroll to Top