ಪುತ್ತೂರು, ಅಕ್ಟೋಬರ್ 18, 2025 (ಕರಾವಳಿ ಟೈಮ್ಸ್) : ಅಕ್ಟೋಬರ್ 17 ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಎಂಬವರು ಸಮವಸ್ತ್ರ ಧರಿಸದೆ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೆÇಲೀಸ್ ಠಾಣಾ ಎಎಸ್ಸೈ ಚಿದಾನಂದ ರೈ ಹಾಗೂ ಪಿಸಿ ಶ್ರೀಶೈಲ ಎಂ ಕೆ ಅವರು ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರೂ, ಆತ ತನ್ನ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿರುತ್ತಾನೆ. ಈ ಕುರಿತು ಆತನನ್ನು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೊ ವೈರಲ್ ಆಗಿರುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾ ಎಸ್ಪಿ ಅವರು ಎಎಸ್ಸೈ ಚಿದಾನಂದ ರೈ ಹಾಗೂ ಪಿಸಿ ಶ್ರೀಶೈಲ ಎಂ ಕೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
18 October 2025
- Blogger Comments
- Facebook Comments
Subscribe to:
Post Comments (Atom)

















0 comments:
Post a Comment