ಪಂಪ್ ವೆಲ್-ಕಂಕನಾಡಿ ರಸ್ತೆ ಅಭಿವೃದ್ದಿ ಕಾಮಗಾರಿ : 6 ತಿಂಗಳ ಕಾಲ ವಾಹನ ಸಂಚಾರಕ್ಕೆ ಬದಲಿ ಮಾರ್ಗ - Karavali Times ಪಂಪ್ ವೆಲ್-ಕಂಕನಾಡಿ ರಸ್ತೆ ಅಭಿವೃದ್ದಿ ಕಾಮಗಾರಿ : 6 ತಿಂಗಳ ಕಾಲ ವಾಹನ ಸಂಚಾರಕ್ಕೆ ಬದಲಿ ಮಾರ್ಗ - Karavali Times

728x90

15 October 2025

ಪಂಪ್ ವೆಲ್-ಕಂಕನಾಡಿ ರಸ್ತೆ ಅಭಿವೃದ್ದಿ ಕಾಮಗಾರಿ : 6 ತಿಂಗಳ ಕಾಲ ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಮಂಗಳೂರು, ಅಕ್ಟೋಬರ್ 15, 2025 (ಕರಾವಳಿ ಟೈಮ್ಸ್) : ನಗರದ ಪಂಪ್‍ವೆಲ್ ವೃತ್ತದಿಂದ ಕಂಕನಾಡಿ ಬೈಪಾಸ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದರಿಂದ ಅಕ್ಟೋಬರ್ 13 ರಿಂದ ಎಪ್ರಿಲ್ 15 ರವರೆಗೆ (6 ತಿಂಗಳು) ವಾಹನಗಳÀ ಸಂಚಾರದಲ್ಲಿ ಮಾರ್ಗ ಬದಲಾಯಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.

ಪಂಪ್ ವೆಲ್ ವೃತ್ತದಿಂದ ಕಂಕನಾಡಿ ಬೈಪಾಸ್ ವರೆಗೆ ರಸ್ತೆಯ ಪ್ರಥಮ ಹಾಗೂ ದ್ವಿತೀಯ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಮಯದಲ್ಲಿ  ದ್ವಿ-ಮುಖ ರಸ್ತೆಯ ಒಂದು ರಸ್ತೆಯನ್ನು ಕರಾವಳಿ ಜಂಕ್ಷನ್ನಿಂದ   ಪಂಪ್ ವೆಲ್ ವರೆಗೆ ವಾಹನಗಳು ಸಂಚರಿಸಲು ತಾತ್ಕಾಲಿಕವಾಗಿ ಏಕಮಖ ರಸ್ತೆಯನ್ನಾಗಿ ಘೋಷಿಸಿದೆ. ಅದೇ ರೀತಿ ಪಂಪ್ ವೆಲ್ ಕಡೆಯಿಂದ-ಕಂಕನಾಡಿ ಓಲ್ಡ್ ರಸ್ತೆ-ಕಂಕನಾಡಿ ಜಂಕ್ಷನ್ ರಸ್ತೆಯನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಯನ್ನಾಗಿ ಘೋಷಿಸಿದೆ. ಏಕಮುಖ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ತರಹ ವಾಹನಗಳ ನಿಲುಗಡೆ ಮಾಡುವುದನ್ನು ನಿಷೇಧಿಸಿದೆ. 

ಪಡೀಲ್ ಹಾಗೂ ತೊಕ್ಕೊಟ್ಟು ಕಡೆಯಿಂದ ಪಂಪ್ ವೆಲ್ ವೃತ್ತಕ್ಕೆ ಬಂದು ಕರಾವಳಿ ವೃತ್ತಕ್ಕೆ ಹೋಗುವ ಎಲ್ಲಾ ವಾಹನಗಳು ಕಂಕನಾಡಿ ಓಲ್ಡ್ ರಸ್ತೆಯ ಮೂಲಕ ಕಂಕನಾಡಿ ಜಂಕ್ಷನ್ನಿಗೆ ಬಂದು ಬಲಕ್ಕೆ ತಿರುಗಿ ಕರಾವಳಿ ವೃತ್ತದ ಕಡೆಗೆ ಸಂಚರಿಸಬೇಕು. ಫಳ್ನೀರ್ ರಸ್ತೆಯಿಂದ ಹಾಗೂ ವೆಲೆನ್ಸಿಯಾ ರಸ್ತೆಯಿಂದ ಪಂಪ್ ವೆಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಕಂಕನಾಡಿ ಜಂಕ್ಷನ್ನಿನಿಂದ ನೇರವಾಗಿ ಕರಾವಳಿ ಜಂಕ್ಷನ್ನಿಗೆ ಬಂದು ಬಲಕ್ಕೆ ತಿರುಗಿ ಪಂಪ್ ವೆಲ್ ವೃತ್ತದ ಕಡೆಗೆ ಸಂಚರಿಸಬೇಕು ಎಂದು ನಗರ ಪೆÇೀಲಿಸ್ ಆಯುಕ್ತರು ಆದೇಶಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಂಪ್ ವೆಲ್-ಕಂಕನಾಡಿ ರಸ್ತೆ ಅಭಿವೃದ್ದಿ ಕಾಮಗಾರಿ : 6 ತಿಂಗಳ ಕಾಲ ವಾಹನ ಸಂಚಾರಕ್ಕೆ ಬದಲಿ ಮಾರ್ಗ Rating: 5 Reviewed By: karavali Times
Scroll to Top