ಬಂಟ್ವಾಳ, ಅಕ್ಟೋಬರ್ 15, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಅಕ್ಟೋಬರ್ 26ರಂದು ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಭವನದಲ್ಲಿ ‘ಯುವ ಪ್ರೇರಣೆ-2025 ಬ್ಯಾಂಕಿಂಗ್ ಸಾಲ ಮತ್ತು ಸ್ವಉದ್ಯೋಗ ಮಾಹಿತಿ ಕಾರ್ಯಾಗಾರ’ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಬ್ಯಾಂಕ್ ಬಿ ಸಿ ರೋಡು ಶಾಖೆಯ ಸೀನಿಯರ್ ಬ್ರಾಂಚ್ ಮೆನೇಜರ್ ಪುರಂದರ, ಉದ್ಯಮಿ ಎಸ್ ಗಂಗಾಧರ, ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಭಾಗವಹಿಸುವರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿರಂತರ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಲಿದ್ದು, ತಾಲೂಕು ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಸಿಕ್ ಹೊಟೇಲ್ ಉದ್ಯಮಿ ಗಣೇಶ ಭಂಡಾರಿಬೆಟ್ಟು, ಕೊಡುಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕೆ ಕುಶಾಲಪ್ಪ ಮೂಲ್ಯ, ಪದ್ಮಿನಿ ದೇವಣ್ಣ ಮಂಗಳೂರು, ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್‍ದಾಸ್, ಉಡುಪಿ ಉದ್ಯಮಿ ದಯಾ ಯೋಗೀಶ್, ಸಿದ್ದಕಟ್ಟೆ ಪದವಿ ಕಾಲೇಜಿನ ಉಪನ್ಯಾಸಕ ಡಾ ಅಭಿನಂದನ್ ಕುಲಾಲ್, ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಪ್ರಾಧ್ಯಾಪಕ ಆನಂದ್ ಎಂ ಕಿದೂರು, ಹಿರಿಯ ವರದಿಗಾರ ವಿನೋದ್ ಪುದು, ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಬಬಿತಾ ಗಣೇಶ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ ನಾವೂರು ಭಾಗವಹಿಸುವರು.
ಇದೇ ವೇಳೆ ಏಷ್ಯನ್ ಢೆಪ್ ರಾಪಿಡ್ ಟೀಮ್ ಚೆಸ್ ಚಾಂಪಿಯನ್ ಶಿಪ್ಪಿನಲ್ಲಿ ಚಿನ್ನದ ಪದಕ ಗಳಿಸಿರುವ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕು ಯಶಸ್ವಿ ಕುಲಾಲ್ ಅವರಿಗೆ ಸನ್ಮಾನ ಕಾರ್ಯಕ್ರಮ, ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಲಾಲ ಸೇವಾದಳದ ಚೈತನ್ಯ ಮಕ್ಕಳಿಂದ ‘ಮಕ್ಕಳ ರಾಜ್ಯ’ ನವ್ಯ ರಂಗ ನಾಟಕ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ತಿಳಿಸಿದ್ದಾರೆ.














0 comments:
Post a Comment