ಬಂಟ್ವಾಳ, ಅಕ್ಟೋಬರ್ 14, 2025 (ಕರಾವಳಿ ಟೈಮ್ಸ್) : ಸ್ಕೂಟರ್ ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹಸವಾರೆ ತಾಯಿ ಮೃತಪಟ್ಟು ಸವಾರ ಮಗ ಗಾಯಗೊಂಡ ಘಟನೆ ಮಾಣಿಲ ಗ್ರಾಮದ ಓಣಿಬಾಗಿಲು ಎಂಬಲ್ಲಿ ಅ 12 ರಂದು ಸಂಭವಿಸಿದೆ.
ಮೃತ ಸಹಸವಾರೆಯನ್ನು ಸುನಂದ ಹಾಗೂ ಗಾಯಗೊಂಡವರನ್ನು ಅವರ ಮಗ ಮೋಹನ್ ಎಸ್ ಎಂದು ಹೆಸರಿಸಲಾಗಿದೆ. ಮೋಹನ್ ಅವರು ತನ್ನ ತಾಯಿಯನ್ನು ಸ್ಕೂಟರಿನಲ್ಲಿ ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಮಾಣಿಲ-ಪೆರುವಾಯಿ ರಸ್ತೆಯಲ್ಲಿ ಸೊರಂಪಳ್ಳಿ ಕಡೆಯಿಂದ ಬೆರಿಪದವು ಕಡೆಗೆ ಸಂಚರಿಸುತ್ತಿದ್ದ ವೇಳೆ ಓಣಿಬಾಗಿಲು ಎಂಬಲ್ಲಿ ತಿರುವು ರಸ್ತೆಯಲ್ಲಿ ಸ್ಕೂಟರಿಗೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಪುತ್ತೂರ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತಲೆಯ ಹಿಂಬದಿ ಹಾಗೂ ಕೈಗಳಿಗೆ ಗಂಭೀರ ಗಾಯಗೊಂಡಿದ್ದ ಸಹಸವಾರೆ ಸುನಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಅ 13 ರಂದು ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment