ಬಂಟ್ವಾಳ, ಅಕ್ಟೋಬರ್ 23, 2025 (ಕರಾವಳಿ ಟೈಮ್ಸ್) : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಾದಚಾರಿಗೆ ಸ್ಕೂಟರ್ ಡಿಕ್ಕಿ ಹೊಡೆದು ಪಾದಚಾರಿ ಸಹಿತ ಸ್ಕೂಟರ್ ಸವಾರರು ಗಾಯಗೊಂಡ ಘಟನೆ ನಂದಾವರ-ಪಾಣೆಮಂಗಳೂರು ರಸ್ತೆಯ ನಂದಾವರ ಕ್ರಾಸ್ ಬಳಿ ಅ 20 ರಂದು ರಾತ್ರಿ ವೇಳೆ ಸಂಭವಿಸಿದೆ.
ಗಾಯಗೊಂಡವರನ್ನು ಪಾದಚಾರಿ ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮುಹಮ್ಮದ್ ಶರೀಫ್ ಅವರ ಪುತ್ರ ಮಹಮ್ಮದ್ ಸವಾದ್ (20) ಹಾಗೂ ಸ್ಕೂಟರ್ ಸವಾರರಾದ ಅಕ್ಬರ್ ಹಾಗೂ ಇಂತಿಯಾಝ್ ಅಹ್ಮದ್ ಎಂದು ಹೆಸರಿಸಲಾಗಿದೆ.
ಮಹಮ್ಮದ್ ಸವಾದ್ ಅ 20 ರಂದು ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 8 ಗಂಟೆ ವೇಳೆಗೆ ನಂದಾವರ-ಪಾಣೆಮಂಗಳೂರು ರಸ್ತೆಯಲ್ಲಿ ನಂದಾವರ ಕ್ರಾಸ್ ಬಳಿಯಿರುವ ದ್ವಾರವನ್ನು ದಾಟಿ ರಸ್ತೆಯ ಬದಿಯಲ್ಲಿ ನಂದಾವರ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸಜಿಪಮುನ್ನೂರು ಗ್ರಾಮದ ನಂದಾವರ ಕ್ರಾಸಿನಿಂದ ನಂದಾವರ ಕಡೆಗೆ ಇಂತಿಯಾಝ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬಂದ ಸ್ಕೂಟರ್ ಸವಾರ ಅಕ್ಬರ್ ಪಾದಚಾರಿ ಸವಾದನ ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಪಾದಚಾರಿ ಸವಾದ್ ಹಾಗೂ ಸ್ಕೂಟರ್ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















0 comments:
Post a Comment