ಮಿತ್ತಬೈಲು : ಹೆದ್ದಾರಿ ಬದಿ ನಡೆದು ಹೋಗುತ್ತಿದ್ದ ಬಾಲಕಗೆ ಬೈಕ್ ಡಿಕ್ಕಿ ಹೊಡೆದು ಗಾಯ - Karavali Times ಮಿತ್ತಬೈಲು : ಹೆದ್ದಾರಿ ಬದಿ ನಡೆದು ಹೋಗುತ್ತಿದ್ದ ಬಾಲಕಗೆ ಬೈಕ್ ಡಿಕ್ಕಿ ಹೊಡೆದು ಗಾಯ - Karavali Times

728x90

23 October 2025

ಮಿತ್ತಬೈಲು : ಹೆದ್ದಾರಿ ಬದಿ ನಡೆದು ಹೋಗುತ್ತಿದ್ದ ಬಾಲಕಗೆ ಬೈಕ್ ಡಿಕ್ಕಿ ಹೊಡೆದು ಗಾಯ

ಬಂಟ್ವಾಳ, ಅಕ್ಟೋಬರ್ 23, 2025 (ಕರಾವಳಿ ಟೈಮ್ಸ್) : ಬೈಕ್ ಡಿಕ್ಕಿ ಹೊಡೆದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಬಿ ಸಿ ರೋಡು ಸಮೀಪದ ಮಿತ್ತಬೈಲು ಎಂಬಲ್ಲಿ ಅ 20 ರಂದು ರಾತ್ರಿ ವೇಳೆ ಸಂಭವಿಸಿದೆ. 

ಗಾಯಗೊಂಡ ಪಾದಚಾರಿ ಬಾಲಕನನ್ನು ಬಿ ಮೂಡ ಗ್ರಾಮದ ತಾಳಿಪಡ್ಪು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮುಹಮ್ಮದ್ ರಾಫೀಜ್ (16) ಹಾಗೂ ಬೈಕ್ ಸವಾರ ಮುಹಮ್ಮದ್ ಆಸಿಫ್ ಎಂದು ಹೆಸರಿಸಲಾಗಿದೆ. 

ಬಾಲಕ ಮುಹಮ್ಮದ್ ರಾಫೀಜ್ ಅ 20 ರಂದು ರಾತ್ರಿ 10 ಗಂಟೆ ವೇಳೆಗೆ ಕೈಕಂಬದ ಮಿತ್ತಬೈಲು ಎಂಬಲ್ಲಿ ಹಾದು ಹೋಗಿರುವ ಬೆಂಗಳೂರು ಮಂಗಳೂರು ದ್ವಿ-ಪಥ ರಾಷ್ಟ್ರೀಯ ಹೆದಾರಿಯನ್ನು ದಾಟಿ ಮಂಗಳೂರು ಕಡೆಯಿಂದ ಬಿ ಸಿ ರೋಡಿಗೆ ಹೋಗುವ ಏಕಮುಖ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಮಂಗಳೂರು ಕಡೆಯಿಂದ ಬಿ ಸಿ ರೋಡು ಕಡೆಗೆ ಧಾವಿಸಿ ಬಂದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಘಟನೆಯಿಂದ ಬಾಲಕ ರಾಫೀಜ್ ಹಾಗೂ ಬೈಕ್ ಸವಾರ ಮುಹಮ್ಮದ್ ಆಸಿಫ್ ಇಬ್ಬರಿಗೂ ಗಾಯಗಳಾಗಿವೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಿತ್ತಬೈಲು : ಹೆದ್ದಾರಿ ಬದಿ ನಡೆದು ಹೋಗುತ್ತಿದ್ದ ಬಾಲಕಗೆ ಬೈಕ್ ಡಿಕ್ಕಿ ಹೊಡೆದು ಗಾಯ Rating: 5 Reviewed By: karavali Times
Scroll to Top