ಬಂಟ್ವಾಳ, ಅಕ್ಟೋಬರ್ 16, 2025 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ಶಂಭೂರು-ಬೊಂಡಾಲ ಸಮೀಪದ ಶೇಡಿಗುರಿ ಯುವ ಸಂಗಮ ಸೇವಾ ಟ್ರಸ್ಟ್ ಇದರ ಅಧೀನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಡೀಕಯ್ಯ ಪೂಜಾರಿ ನಾಟಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರುಗಳಾಗಿ ಪಿ ಕೇಶವ ನಾಯ್ಕ್ ಶೇಡಿಗುರಿ ಹಾಗೂ ಮೋಹಿನಿ ಧರ್ಣಪ್ಪ ಪೂಜಾರಿ, ಕಾರ್ಯದರ್ಶಿಯಾಗಿ ಶಿವರಾಜ್ ರೆಂಜೆಮಾರ್, ಜೊತೆ ಕಾರ್ಯದರ್ಶಿಯಾಗಿ ಕಿರಣ್ ರೆಂಜೆಮಾರ್, ಕೋಶಾಧಿಕಾರಿಯಾಗಿ ಹರೀಶ್ ಸುವರ್ಣ ಶೇಡಿಗುರಿ, ಜೊತೆ ಕೋಶಾಧಿಕಾರಿಯಾಗಿ ಮಿಥುನ್ ರೆಂಜೆಮಾರ್, ಸಂಚಾಲಕರಾಗಿ ಯಶೋಧರ ಬಂಗೇರ ಕೊಲ್ಲೂರು, ಸಹ ಸಂಚಾಲಕರಾಗಿ ಸುಧೀರ್ ನಿರ್ಮಲ್ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.














0 comments:
Post a Comment