ಬಂಟ್ವಾಳ, ಅಕ್ಟೋಬರ್ 15, 2025 (ಕರಾವಳಿ ಟೈಮ್ಸ್) : ಈ ಹಿಂದೆ ಹಲವಾರು ಸಂಕಷ್ಟ ಮತ್ತು ಕಾನೂನು ತೊಡಕುಗಳನ್ನು ಎದುರಿಸುತ್ತಾ ಬಂದಿರುವ ಕಂಬಳ ಕ್ರೀಡೆಯು ಪ್ರಸಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ಕ್ರೀಡಾ ಮಾನ್ಯತೆ ದೊರೆತಿದ್ದು, ಮುಂಬರುವ ಬಜೆಟಿನಲ್ಲಿ ಹೆಚ್ಚಿನ ಅನುದಾನ ಗಿಟ್ಟಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಸಿದ್ಧಕಟ್ಟೆ-ಕೊಡಂಗೆ ಎಂಬಲ್ಲಿ ಅ 12 ರಂದು ರಾತ್ರಿ ಸಮಾರೋಪಗೊಂಡ ಎರಡನೇ ವರ್ಷದ ‘ರೋಟರಿ ಕಂಬಳ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸಹಿತ ಬಂಟ್ವಾಳ, ಮೊಡಂಕಾಪು, ಸಿದ್ದಕಟ್ಟೆ ಫಲ್ಗುಣಿ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಸಹಭಾಗಿತ್ವ ವಹಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗ್ರಾಮೀಣ ಕೃಷಿಕರ ಕ್ರೀಡೆಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.
ಇದೇ ವೇಳೆ ಪ್ರಗತಿಪರ ಕೃಷಿಕ ಸುರೇಶ ಬಳ್ನಾಡು, ಕಂಬಳದ ಸಾರಥ್ಯ ವಹಿಸಿದ್ದ ಮಾಜಿ ಸಹಾಯಕ ಗವರ್ನರ್ ಎಲ್ಯಾಸ್ ಸ್ಯಾಂಕ್ಟಿಸ್, ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ ಕಾರಂತ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಕಂಬಳ ಕೂಟಗಳಿಂದ ಸರಕಾರ ಪರೋಕ್ಷವಾಗಿ ಲಕ್ಷಾಂತರ ಮೊತ್ತದ ತೆರಿಗೆ ಸಂಗ್ರಹವಾಗುತ್ತಿದೆ. ಮುಂಬರುವ ಬಜೆಟಿನಲ್ಲಿ ಅನುದಾನ ಮೀಸಲಿಡುವುದರ ಜೊತೆಗೆ ಕ್ರಿಕೆಟ್ ಪ್ರೀಮಿಯರ್ ಲೀಗ್ ಮಾದರಿ ಕಂಬಳ ನಡೆದರೂ ಅಚ್ಚರಿ ಇಲ್ಲ ಎಂದರು.
ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಕೂಳೂರು, ಜಿಲ್ಲಾ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು, ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ, ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಶುಭ ಹಾರೈಸಿದರು. ಸಹಾಯಕ ಗವರ್ನರ್ ಡಾ. ಜಯ ಕುಮಾರ್ ಶೆಟ್ಟಿ, ಕೆ. ಪದ್ಮನಾಭ ರೈ, ಉಮೇಶ್ ರಾವ್ ಮಿಜಾರು, ನಾರಾಯಣ ಹೆಗ್ಡೆ, ರಾಜಗೋಪಾಲ ರೈ, ಡಾ. ಆತ್ಮರಂಜನ್ ರೈ, ಜಯರಾಮ ರೈ, ಅಶ್ವನಿ ಕುಮಾರ್ ರೈ, ಡಾ. ಸೂರ್ಯನಾರಾಯಣ ಕುಕ್ಕಾಡಿ, ಡಾ. ಶಿವಪ್ರಸಾದ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷ ಎಂ. ಪದ್ಮರಾಜ ಬಲ್ಲಾಳ್, ಬಂಟ್ವಾಳ ಕ್ಲಬ್ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಕಾರ್ಯದರ್ಶಿ ಯಾಸೀರ್ ಕಲ್ಲಡ್ಕ, ಸಿದ್ಧಕಟ್ಟೆ ಫಲ್ಗುಣಿ ಕ್ಲಬ್ ಅಧ್ಯಕ್ಷ ದುರ್ಗದಾಸ್ ಶೆಟ್ಟಿ ಕರೆಂಕಿಜೆ, ಕಾರ್ಯದರ್ಶಿ ಟೀನಾ ಡಿಕೋಸ್ತ, ಮೊಡಂಕಾಪು ಕ್ಲಬ್ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರಸನ್ನ ರಾವ್, ಮಂಗಳೂರು ಸೆಂಟ್ರಲ್ ಕ್ಲಬ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ವಲಯ ಸೇನಾನಿ ಬಿ. ಪ್ರಕಾಶ್ ಬಾಳಿಗಾ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸುರೇಂದ್ರ ಬಿ. ಕಂಬಳಿ ಫರಂಗಿಪೇಟೆ, ರವಿ ಜಲಾನ್, ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೆÇಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ, ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಹರೇಕಳ ಕಂಬಳ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸುಜಾತ ಪದ್ಮನಾಭ ರೈ, ಪ್ರಮುಖರಾದ ಶ್ರುತಿ ಮಾಡ್ತಾ, ದಿವಾಕರ ಶೆಟ್ಟಿ ಪರಾರಿಗುತ್ತು, ಅಂಟೆಸ್ನಿ ಸಿಕ್ವೇರ, ಅರುಣ್ ಶೆಟ್ಟಿ ಬಜ್ಪೆ, ರಾಜೇಶ ಶೆಟ್ಟಿ ಸೀತಾಳ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಮೈಕೆಲ್ ಡಿಕೋಸ್ತ, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಜಿಲ್ಲಾ ತೀರ್ಪುಗಾರರಾದ ವಿಜಯ ಕುಮಾರ್ ಕಂಗಿನಮನೆ, ಎಡ್ತೂರು ರಾಜೀವ ಶೆಟ್ಟಿ, ಸ್ಥಳದಾನಿ ಚಂದ್ರಶೇಖರ್ ಕೊಡಂಗೆ, ಪೂಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ರಾಜೇಶ್ ಮೊದಲಾದವರು ಭಾಗವಹಿಸಿದ್ದರು.
ಲೊರೆಟ್ಟೊ ಹಿಲ್ಸ್ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು. ಕ್ಲಬ್ ಮಾಜಿ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ಧಕಟ್ಟೆ ಮತ್ತು ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕಂಬಳ ಸಮಾಪ್ತಿಗೆ ಮಳೆ ಹಾಗೂ ಧ್ವನಿವರ್ಧಕ ಸಮಸ್ಯೆ
ಕಂಬಳ ಕೂಟಕ್ಕೆ ಕೆಲಹೊತ್ತು ಸುರಿದ ಧಾರಾಕಾರ ಮಳೆ ಅಡ್ಡಿಯಾಯಿತು. ಬೆಳಿಗ್ಗೆಯಿಂದ ಸಂಜೆ ತನಕ ಬಿಸಿಲು ಕಂಡು ಬಂದಿದ್ದರೆ, ಸಂಜೆ 6 ಗಂಟೆ ಬಳಿಕ ರಾತ್ರಿ 9 ಗಂಟೆತನಕ ಧಾರಾಕಾರ ಮಳೆಯಾಗಿದೆ. ಮಳೆಯ ನಡುವೆಯೂ ಕಂಬಳ ಯಶಸ್ವಿಯಾಗಿ ಸಮಾಪನಗೊಂಡಿದೆ. ಒಟ್ಟು 127 ಜೋಡಿ ಓಟದ ಕೋಣಗಳು ಭಾಗವಹಿಸಿದ್ದವು.
ಈ ನಡುವೆ ಜಿಲ್ಲೆಯಲ್ಲಿ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ರಾತ್ರಿ ಗಂಟೆ 11 ರಬಳಿಕ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲದ್ದರಿಂದ ಕೋಣಗಳ ಅಂತಿಮ ಸುತ್ತಿನ ಓಟವು ಧ್ವನಿವರ್ಧಕ ಇಲ್ಲದೆ ಕೊಂಬು ಮತ್ತು ಬ್ಯಾಂಡು ವಾದ್ಯಗಳ ಸದ್ದಿನಿಂದ ಸಮಾಪ್ತಿಗೊಂಡಿತು.
ಕಂಬಳ ಫಲಿತಾಂಶ :
ಹಗ್ಗ ಕಿರಿಯ :
1ನೇ ಬಹುಮಾನ : ಲೊರೆಟ್ಟೋ ಮಹಲ್ತೋಟ ಆನ್ಯ ಅವಿಲ್ ಮಿನೆಜಸ್ (ಓಡಿಸಿದವರು : ಕಕ್ಯಪದವು ಕೃತಿಕ್ ಗೌಡ್ರು)
2ನೇ ಬಹುಮಾನ : ಪೇಜಾವರ ತಿದ್ಯಾ ಕಂಬಳಗುತ್ತು ಶಾರದಾ ಸತೀಶ್ ಶೆಟ್ಟಿ (ಓಡಿಸಿದವರು : ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ)
ನೇಗಿಲು ಕಿರಿಯ :
1ನೇ ಬಹುಮಾನ : ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ (ಓಡಿಸಿದವರು : ಬಾರಾಡಿ ನತೇಶ್)
2ನೇ ಬಹುಮಾನ : ನಿಟ್ಟೆ ಪರಪ್ಪಡಿ ಸುರೇಶ್ ಕೋಟ್ಯಾನ್ (ಓಡಿಸಿದವರು : ಕಕ್ಯಪದವು ಕೃತಿಕ್ ಗೌಡ್ರು)
ನೇಗಿಲು ಸಬ್ ಜೂನಿಯರ್ :
1ನೇ ಬಹುಮಾನ : ಕೊಡವೂರು ಕಂಬಳಕಟ್ಟ ಪಂಚರತ್ನ ಬೈಲುಮನೆ ಸಂತೋಷ್ ಶೆಟ್ಟಿ (ಓಡಿಸಿದವರು : ಪಣಪಿಲ ಪ್ರವೀಣ್ ಕೋಟ್ಯಾನ್)
2ನೇ ಬಹುಮಾನ : ಬೈಲ್ ಕೌಡರು ಕೋರಿಪಡ್ಪು ಮುಂಡಪ್ಪ ಪೂಜಾರಿ (ಓಡಿಸಿದವರು : ವಿಟ್ಲ ಗುಂಡ್ಯಡ್ಕ ಕಿಶೋರ್ ಪೂಜಾರಿ)















0 comments:
Post a Comment