ಚಿತ್ರಕಲಾ ಶಿಕ್ಷಕರಾಗಿ ವಿಶೇಷ ಸಾಧನಗೈದ ಮೂವರಿಗೆ ಕಲಾನಿಧಿ ಪ್ರಶಸ್ತಿ ಪ್ರಕಟ - Karavali Times ಚಿತ್ರಕಲಾ ಶಿಕ್ಷಕರಾಗಿ ವಿಶೇಷ ಸಾಧನಗೈದ ಮೂವರಿಗೆ ಕಲಾನಿಧಿ ಪ್ರಶಸ್ತಿ ಪ್ರಕಟ - Karavali Times

728x90

15 October 2025

ಚಿತ್ರಕಲಾ ಶಿಕ್ಷಕರಾಗಿ ವಿಶೇಷ ಸಾಧನಗೈದ ಮೂವರಿಗೆ ಕಲಾನಿಧಿ ಪ್ರಶಸ್ತಿ ಪ್ರಕಟ

ಬಂಟ್ವಾಳ, ಅಕ್ಟೋಬರ್ 15, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ವಿಶೇಷ ಸಾಧನೆಗೈದ ಸಾಧಕರನ್ನು ಸಮಾಜದಲ್ಲಿ ಗುರುತಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶೈಕ್ಷಣಿಕ ಸಮಿತಿಯು ಕಲಾನಿಧಿ ಪ್ರಶಸ್ತಿ ಪ್ರಕಟಿಸಿದೆ. 

2023ನೇ ಸಾಲಿನ ಕಲಾನಿಧಿ ಪ್ರಶಸ್ತಿಗೆ ಮುಲ್ಕಿ ಪಂಜಿನಡ್ಕ ಅನುದಾನಿತ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ವೆಂಕಿ ಪಲಿಮಾರು, 2024ನೇ ಸಾಲಿನ ಕಲಾನಿಧಿ ಪ್ರಶಸ್ತಿಗೆ ಗುರುವಾಯನಕೆರೆ ಸರಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ವಿ ಕೆ ವಿಟ್ಲ ಹಾಗೂ 2025ನೇ ಸಾಲಿನ ಕಲಾನಿಧಿ ಪ್ರಶಸ್ತಿಗೆ ಮಂಗಳೂರು-ಡೊಂಗರಕೇರಿ ಕೆನರಾ ಪ್ರೌಢಶಾಲಾ ಕಲಾ ಶಿಕ್ಷಕಿ ರಾಜೇಶ್ವರಿ ಕೆ ಅವರು ಆಯ್ಕೆಯಾಗಿದ್ದಾರೆ.

ಕಲಾವಿದರಾದ ಗಣೇಶ್ ಸೋಮಯಾಜಿ, ಗೋಪಾಡ್ಕರ್, ಮೋಹನ್ ಕುಮಾರ್ ಪೆರ್ಮುದೆ, ಎಂ ಎಸ್ ಪುರುಷೋತ್ತಮ್ ಸುಳ್ಯ, ಮನೋರಂಜನಿ ರಾವ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ಪ್ರಶಸ್ತಿ ಪ್ರಕಟಿಸಿದೆ.

ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿಯು ದ ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಮಂಚಿ ಕೊಲ್ನಾಡು ಇವರ ಸಹಕಾರದೊಂದಿಗೆ ಕಲಾನಿಧಿ ಪ್ರಶಸ್ತಿ ಪ್ರಧಾನ ಸಮಾರಂಭವು ಅ 18 ಶನಿವಾರ ಬೆಳಿಗ್ಗೆ 10.30ಕ್ಕೆ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಸಂಚಯಗಿರಿ ರಾಣಿ ಅಬ್ಬಕ್ಕ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಂ ಪೂಜಾರಿ ಪ್ರಶಸ್ತಿ ಪ್ರದಾನ ಮಾಡುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶಶಿಧರ ಜಿ ಎಸ್, ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವ ಶಂಕರ್ ರಾವ್ ಮಂಚಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಗಣೇಶ್ ಸೋಮಯಾಜಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಚಿತ್ರಕಲಾ ಶಿಕ್ಷಕರಾಗಿ ವಿಶೇಷ ಸಾಧನಗೈದ ಮೂವರಿಗೆ ಕಲಾನಿಧಿ ಪ್ರಶಸ್ತಿ ಪ್ರಕಟ Rating: 5 Reviewed By: karavali Times
Scroll to Top