ಬಂಟ್ವಾಳ, ಅಕ್ಟೋಬರ್ 16, 2025 (ಕರಾವಳಿ ಟೈಮ್ಸ್) : ಮೇಸ್ತ್ರಿ ಕಾರ್ಮಿಕ ವ್ಯಕ್ತಿಯೋರ್ವರು ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ನೆಕ್ಕರೆಕಾಡು-ಶಿವಾಜಿನಗರ ಎಂಬಲ್ಲಿ ಅ 15 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ರಾಮಚಂದ್ರ ಎಂದು ಹೆಸರಿಸಲಾಗಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಇವರು ಮನೆಯಲ್ಲಿದ್ದ ವೇಳೆ ಎದೆ ನೋವು ಬಂದು ಕುಸಿದು ಕುಳಿತವರನ್ನು ಅವರ ಪತ್ನಿ ಹಾಗೂ ಪತ್ನಿಯ ತಮ್ಮ ರಾಜೇಶ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment