ಬಂಟ್ವಾಳ, ಅಕ್ಟೋಬರ್ 16, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಗಾಂಜಾ ಹೊಂದಿ ಸೇವನೆ ಮಾಡಲು ಬಂದಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಗಾಂಜಾ ಸಹಿತ ವಶಕ್ಕೆ ಪಡೆದುಕೊಂಡ ಘಟನೆ ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ಅ 15 ರಂದು ಸಂಜೆ ವೇಳೆ ನಡೆದಿದೆ.
ಬಂಧಿತ ಆರೋಪಿಯನ್ನು ಇಮ್ತಿಯಾಜ್ (40) ಎಂದು ಹೆಸರಿಸಲಾಗಿದೆ. ಅ 15 ರಂದು ಸಂಜೆ 5.30 ರ ವೇಳೆಗೆ ಪಾಣೆಮಂಗಳೂರು ಗ್ರಾಮದ ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ಅಟೋ ರಿಕ್ಷಾದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಮಶಾನದ ಸಮೀಪ ಕೆಎ-19-ಡಿ-1806 ನೋಂದಣಿ ಸಂಖ್ಯೆಯ ಅಟೋ ರಿಕ್ಷಾ ನಿಲ್ಲಿಸಿದ ವ್ಯಕ್ತಿ ಕಂಡು ಬಂದಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಈ ಹಿಂದೆ ಬಂಟ್ವಾಳ ನಗರ ಪೆÇಲೀಸು ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 50/2025 ರ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಇಮ್ತಿಯಾಜ್ (40) ಎಂದು ತಿಳಿದು ಬಂದಿದೆ.
ಆತನನ್ನು ಪೊಲೀಸರು ವಿಚಾರಿಸಿದಾಗ ಆತನ ಬಳಿ ಎಂಡಿಎಂಎ ಇದ್ದು, ತಾನು ಎಂಡಿಎಂಎ ಸೇವಿಸಲು ಇಲ್ಲಿ ಬಂದಿರುವುದಾಗಿ ತಿಳಿಸಿದ್ದಾನೆ. ಆತ ಧರಿಸಿದ್ದ ಜೀನ್ಸ್ ಪ್ಯಾಂಟಿನ ಜೇಬಿನಲ್ಲಿ 4 ಖಾಲಿ ಪ್ಲಾಸ್ಟಿಕ್ ಕವರುಗಳು ಹಾಗೂ ಒಂದು ಪ್ಲಾಸ್ಟಿಕ್ ಕವರಿನಲ್ಲಿ 1 ಸಾವಿರ ರೂಪಾಯಿ ಮೌಲ್ಯದ 0.760 ಗ್ರಾಂ (760 ಮಿಲಿ ಗ್ರಾಂ) ಎಂಡಿಎಂಎ ಮಾದಕ ವಸ್ತು ಇರುವುದು ಪತ್ತೆಯಾಗಿದೆ. ಜೊತೆಗೆ ಆತನಲ್ಲಿದ್ದ ಮೊಬೈಲ್ ಹಾಗೂ ಅಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಮೊಬೈಲ್ ಹಾಗೂ ಅಟೋ ರಿಕ್ಷಾ ಮೌಲ್ಯ 20,500/- ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment