ಬಂಟ್ವಾಳ, ನವೆಂಬರ್ 03, 2025 (ಕರಾವಳಿ ಟೈಮ್ಸ್) : ಕತ್ತಿ ಇರುವ ಕಬ್ಬಿಣದ ಕೊಕ್ಕೆಯಿಂದ ಮನೆಯ ಹಿಂದುಗಡೆಯ ಮರದಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಲೈನಿಗೆ ತಾಗಿ ವಿದ್ಯುದಾಘಾತಗೊಂಡು ಮೃತಪಟ್ಟ ಘಟನೆ ಅಳಿಕೆ ಗ್ರಾಮದ ಶಾರದಾ ವಿಹಾರ್ ಎಂಬಲ್ಲಿ ನ 2 ರಂದು ಬೆಳಿಗ್ಗೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಬ್ರಾಹಿಂ ಎಂಬವರ ಪುತ್ರ ಇಸ್ಮಾಯಿಲ್ ಅಳಿಕೆ (38) ಎಂದು ಹೆಸರಿಸಲಾಗಿದೆ. ಇವರು ಭಾನುವಾರ ಬೆಳಿಗ್ಗೆ ಸುಮಾರು 10.2ರ ವೇಳೆಗೆ ಮನೆಯ ಹಿಂಬದಿಯಲ್ಲಿರುವ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ಕತ್ತಿ ಇದ್ದ ಕಬ್ಬಿಣದ ಕೊಕ್ಕೆಯನ್ನು ಹಿಡಿದುಕೊಂಡು ಮನೆಯ ಹಿಂದುಗಡೆ ಹೋದವರ ಬೊಬ್ಬೆ ಕೇಳಿ ಮನೆ ಮಂದಿ ಹೋಗಿ ನೋಡಿದಾಗ ಇಸ್ಮಾಯಿಲ್ ಅವರು ನೆಲದ ಮೇಲೆ ಬಿದ್ದಿದ್ದರು. ತಕ್ಷಣ ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತೆಂಗಿನ ಕಾಯಿ ತೆಗೆಯುತ್ತಿದ್ದ ವೇಳೆ ಕಬ್ಬಿಣದ ಕೊಕ್ಕೆ ಮರದ ಹತ್ತಿರ ಹಾದು ಹೋಗಿದ್ದ ವಿದ್ಯುತ್ ಲೈನಿಗೆ ತಾಗಿ ವಿದ್ಯುತ್ ಆಘಾತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಸಂಬಂಧಿ ಇಬ್ರಾಹಿಂ ಸಹೀದ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಅರ್ ಪ್ರಕರಣ ದಾಖಲಾಗಿದೆ.












0 comments:
Post a Comment