ಬಿ.ಸಿ.ರೋಡು : ಕೌಟುಂಬಿಕ ವೈಷಮ್ಯದಿಂದ ಪತಿಯ ಅಂಗಡಿಗೆ ನುಗ್ಗಿ ಪತ್ನಿಯಿಂದಲೇ ಚೂರಿ ಇರಿತ - Karavali Times ಬಿ.ಸಿ.ರೋಡು : ಕೌಟುಂಬಿಕ ವೈಷಮ್ಯದಿಂದ ಪತಿಯ ಅಂಗಡಿಗೆ ನುಗ್ಗಿ ಪತ್ನಿಯಿಂದಲೇ ಚೂರಿ ಇರಿತ - Karavali Times

728x90

19 November 2025

ಬಿ.ಸಿ.ರೋಡು : ಕೌಟುಂಬಿಕ ವೈಷಮ್ಯದಿಂದ ಪತಿಯ ಅಂಗಡಿಗೆ ನುಗ್ಗಿ ಪತ್ನಿಯಿಂದಲೇ ಚೂರಿ ಇರಿತ

ಬಂಟ್ವಾಳ, ನವೆಂಬರ್ 19, 2025 (ಕರಾವಳಿ ಟೈಮ್ಸ್) : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಅಂಗಡಿಗೆ ನುಗ್ಗಿದ ಪತ್ನಿಯೇ ಪತಿಗೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬಿ ಸಿ ರೋಡು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಬಳಿ ಬುಧವಾರ ಸಂಜೆ ವೇಳೆ ನಡೆದಿದೆ.

ಚೂರಿ ಇರಿತಕ್ಕೊಳಗಾದ ಪತಿಯನ್ನು ಇಲ್ಲಿನ ನಿವಾಸಿ ಕೃಷ್ಣಕುಮಾರ್ ಸೋಯಮಾಜಿ ಎಂದು ಹೆಸರಿಸಲಾಗಿದ್ದು, ಆರೋಪಿ ಪತ್ನಿಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ. ಇವರ ಮಧ್ಯೆ ಕೌಟುಂಬಿಕ ವೈಷಮ್ಯ ಇದೆ ಎನ್ನಲಾಗಿದ್ದು, ಇದೇ ಕಾರಣದಿಂದ ಪತ್ನಿ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ. ಕೃತ್ಯ ಎಸಗಿದ ಪತ್ನಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್ ತನಿಖೆಯ ಬಳಿಕ ಕೃತ್ಯಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬರಲಿದೆ. ಇರಿತದಿಂದ ಗಾಯಗೊಂಡಿರುವ ಪತಿ ಸೋಮಯಾಜಿ ಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. 

ಸೋಮವಾರ ಸಂಜೆ ಏಕಾಏಕಿ ಪತಿಯ ಸೋಮಯಾಜಿ ಟೆಕ್ಸ್ಟ್ ಟೈಲ್ಸ್ ಅಂಗಡಿಗೆ ಬುರ್ಖಾಧಾರಿಯಾಗಿ ಬಂದ ಪತ್ನಿ ಜ್ಯೋತಿ ಅವರು ಅಂಗಡಿಯ ಕ್ಯಾಶ್ ಕೌಂಟರಿನಲ್ಲಿದ್ದ ಪತಿಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಪತ್ನಿಯನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಘಟನೆಯ ಹೆಚ್ಚಿನ ವಿವರ ಗೊತ್ತಾಗಬೇಕಷ್ಟೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಕೌಟುಂಬಿಕ ವೈಷಮ್ಯದಿಂದ ಪತಿಯ ಅಂಗಡಿಗೆ ನುಗ್ಗಿ ಪತ್ನಿಯಿಂದಲೇ ಚೂರಿ ಇರಿತ Rating: 5 Reviewed By: karavali Times
Scroll to Top