ಮಂಗಳೂರು, ನವೆಂಬರ್ 19, 2025 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದಿಂದ ನಗರಕ್ಕೆ ನೀರು ಪೂರೈಸುವ 1100 ಮಿ.ಮೀ. ವ್ಯಾಸದ ಮುಖ್ಯ ಕೊಳವೆಯು ನವೆಂಬರ್ 17 ರಂದು ಬೆಳಗಿನ ಸಮಯದಲ್ಲಿ ಪಡೀಲ್ ಸಮೀಪದ ಕಣ್ಣೂರು ಬಳಿ ಹಾನಿಗೊಳಗೊಂಡಿದೆ. ಈ ಹಿನ್ನೆಲೆ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನ 19 ರಂದು ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದು ಗುರುವಾರ (ನ 20) ಬೆಳಿಗ್ಗೆ ವೇಳೆಗೆ ನೀರು ಸರಬರಾಜು ಯಥಾಸ್ಥಿತಿಗೆ ಮರಳಲಿದೆ.
ಸಾರ್ವಜನಿಕರು ಈ ವಿಚಾರ ಗಮನಿಸಿ ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.















0 comments:
Post a Comment