ಕಡಬ, ನವೆಂಬರ್ 02s, 2025 (ಕರಾವಳಿ ಟೈಮ್ಸ್) : ಕಡಬ ಗ್ರಾಮದ ಸಂತೆಕಟ್ಟೆ ಬಳಿ ಮೀನು ಮಾರಾಟಕಟ್ಟೆಯಲ್ಲಿ ಮೀನು ಮಾರಾಟದ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದ ಘಟನೆ ನ 1 ರಂದು ನಡೆದಿದ್ದು, ಈ ಬಗ್ಗೆ ಇತ್ತಂಡಗಳ ಒಟ್ಟು 5 ಮಂದಿಯ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ರಾಜು ಮ್ಯಾಥ್ಯೂ, ಆದಂ, ಫಯಾಜ್, ರಕ್ಷಿತ್ ಮಾಣಿ ಹಾಗೂ ನೌಫಲ್ ಎಂದು ಹೆಸರಿಸಲಾಗಿದೆ. ನ 1 ರಂದು ಬೆಳಿಗ್ಗೆ ಮೀನು ಮಾರಾಟದ ವಿಚಾರದಲ್ಲಿ ಎರಡು ಅಂಗಡಿಯವರಿಗೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದಿರುವ ಬಗ್ಗೆ ವಿಡಿಯೋ ಕಂಡು ಬಂದ ಹಿನ್ನೆಲೆಯಲ್ಲಿ, ಕಡಬ ಪೆÇಲೀಸ್ ಠಾಣಾ ಪಿಎಸ್ಸೈ ಅಭಿನಂದನ ಎಂ ಎಸ್ ಅವರು ವಿಡಿಯೋ ಪರಿಶೀಲಿಸಿದಾಗ, ಮೀನು ಮಾರಾಟದ ವಿಚಾರಕ್ಕೆ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸಾರ್ವಜನಿಕ ಸ್ಥಳದಲ್ಲಿ ರಾಜು ಮ್ಯಾಥ್ಯೂ, ಆದಂ, ಫಯಾಜ್, ರಕ್ಷಿತ್ ಮಾಣಿ ಹಾಗೂ ನೌಫಾಲ್ ಎಂಬವರುಗಳು ಪರಸ್ಪರ ಹೊಡೆದಾಟ ಮಾಡಿಕೊಂಡಿರುವುದು ತಿಳಿದುಬಂದಿರುತ್ತದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವಂತೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡ ಆರೋಪಿಗಳ ವಿರುದ್ದ ಕಡಬ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2025 ಕಲಂ 194(2) ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












0 comments:
Post a Comment