ಬಂಟ್ವಾಳ, ನವೆಂಬರ್ 03s, 2025 (ಕರಾವಳಿ ಟೈಮ್ಸ್) : ಸ್ವತಂತ್ರ ಭಾರತವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ವಲ್ಲಭಾಯ್ ಪಟೇಲರ ಯೋಗದಾನ ಮಹತ್ತರವಾದುದು. ಉಕ್ಕಿನ ಮನುಷ್ಯನೆಂದೇ ಖ್ಯಾತರಾದ ಇವರು ಸ್ವತಂತ್ರ ಭಾರತದ ಮೊಟ್ಟಮೊದಲ ಗೃಹಮಂತ್ರಿಗಳಾಗಿ ದೇಶಕ್ಕೆ ನೀಡಿದ ಸೇವೆ ಅನುಪಮವಾದುದು. ಇವರನ್ನು ಇಂದಿನ ಯುವ ಜನತೆ ಆದರ್ಶವಾಗಿರಿಸಿಕೊಂಡು ಮುನ್ನಡೆಯಬೇಕು ಎಂದು ಬಂಟ್ವಾಳ ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ನೆರೆದವರಿಗೆ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣ ಪ್ರಭು ಹಾಗೂ ಬಿ ಆರ್ ಎಂ ಪಿ ಸಿ ಶಾಲಾ ಕನ್ನಡ ಶಿಕ್ಷಕ ಮನೋಹರ ಎಸ್ ದೊಡ್ಡಮನಿ ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳು ‘ಏಕತಾ ನಡಿಗೆ’ಯಲ್ಲಿ ಪಾಲ್ಗೊಂಡರು.












0 comments:
Post a Comment