ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ : 300ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್, 250ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿ ಸೈಬರ್ ವಂಚನೆ ಮಾಡುತ್ತಿದ್ದ ಖದೀಮರು ಅಂದರ್ - Karavali Times ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ : 300ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್, 250ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿ ಸೈಬರ್ ವಂಚನೆ ಮಾಡುತ್ತಿದ್ದ ಖದೀಮರು ಅಂದರ್ - Karavali Times

728x90

17 November 2025

ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ : 300ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್, 250ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿ ಸೈಬರ್ ವಂಚನೆ ಮಾಡುತ್ತಿದ್ದ ಖದೀಮರು ಅಂದರ್

 ಮಂಗಳೂರು, ನವೆಂಬರ್ 17, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರ ಸಿ.ಇ.ಎನ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ದಾಖಲಾದ 45/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು ಕಲಂ.420 ಐಪಿಸಿ  ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7,27,000/- ರೂಪಾಯಿ ಹಣವನ್ನು ಪಡೆದು ವಂಚನೆ ಮಾಡಿರುವ ಬಗ್ಗೆ ನೀಡಲಾಗಿರುವ ದೂರಿಗೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಧಿತ ಸೈಬರ್ ವಂಚಕರನ್ನು ತ್ರಿಪುರಾ ರಾಜ್ಯದ ಧಲಾಯಿ ನಿವಾಸಿ ರಂಗ್ ರುಂಗಾ ರ್ಯಾಂಗ್ ಎಂಬವರ ಪುತ್ರ ದಮೆಂಜಾಯ್ ರ್ಯಾಂಗ್ (27) ಹಾಗೂ ಮಣಿಪುರ ರಾಜ್ಯದ ಕಂಗ್ ಪೋಪ್ಕಿ ಜಿಲ್ಲಾ ನಿವಾಸಿ ಹ್ಯಾಂಗ್ಟೆ ರಿಯೈಲ್ ಕೋಂ ಅಲಿಯಾಸ್ ಮಾಂಗ್ಟೆ ಅಮೋಶ್ (33) ಎಂದು ಗುರುತಿಸಲಾಗಿದೆ. 

ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ವಿವರ ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ ದಮೆಂಜಾಯ್ ರ್ಯಾಂಗ್ ಎಂಬಾತನನ್ನು ನವೆಂಬರ್ 13 ರಂದು ಬೆಂಗಳೂರಿನಲ್ಲಿ  ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಸೈಬರ್ ವಂಚಕರಿಗೆ ನೀಡಿದ ಸುಳಿವಿನ ಆಧಾರದಲ್ಲಿ ಹ್ಯಾಂಗ್ಟೆ ರಿಯೈಲ್ ಕೋಂ ಅಲಿಯಾಸ್ ಮಾಂಗ್ಟೆ ಅಮೋಶ್ ಎಂಬಾತನನ್ನು ನವೆಂಬರ್ 15 ರಂದು ಬೆಂಗಳೂರಿನಲ್ಲಿ  ದಸ್ತಗಿರಿ ಮಾಡಿ ನ 16 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ತನಿಖೆಯ ವೇಳೆ ಆರೋಪಿತನಾದ ಹ್ಯಾಂಗ್ಟೆ ರಿಯೈಲ್ ಕೋಂ ಅಲಿಯಾಸ್ ಮಾಂಗ್ಟೆ ಅಮೋಶ್ ಎಂಬಾತನು   300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹಾಗೂ 250ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಸೈಬರ್ ವಂಚನೆಗೆ ಬಳಕೆ ಮಾಡಿರುವುದು ಕಂಡುಬಂದಿದೆ. ಸದ್ರಿ  ಆರೋಪಿತನಿಂದ 8 ಮೊಬೈಲ್ ಫೆÇೀನುಗಳು, 20 ವಿವಿಧ ಬ್ಯಾಂಕುಗಳ ಡೆಬಿಟ್ ಕಾರ್ಡುಗಳು, 18 ವಿವಿಧ ಬ್ಯಾಂಕುಗಳ ಪಾಸ್ ಪುಸ್ತಕಗಳು, 11 ವಿವಿಧ ಬ್ಯಾಂಕುಗಳ ಚೆಕ್ ಪುಸ್ತಕ ಹಾಗೂ 7 ಸಿಮ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೆÇಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ : 300ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್, 250ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿ ಸೈಬರ್ ವಂಚನೆ ಮಾಡುತ್ತಿದ್ದ ಖದೀಮರು ಅಂದರ್ Rating: 5 Reviewed By: karavali Times
Scroll to Top