ಪುದು : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು - Karavali Times ಪುದು : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು - Karavali Times

728x90

19 November 2025

ಪುದು : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು

ಬಂಟ್ವಾಳ, ನವೆಂಬರ್ 19, 2025 (ಕರಾವಳಿ ಟೈಮ್ಸ್) : ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳವುಗೈದ ಘಟನೆ ಪುದು ಗ್ರಾಮದ ಪುದು ಸರಕಾರಿ ಶಾಲಾ ಬಳಿಯ ಸಮೋರಾ ರೆಸಿಡೆನ್ಸಿಯಲ್ಲಿ ನ 17 ರಂದು ನಡೆದಿದೆ.

ರೆಸಿಡೆನ್ಸಿಯ ಮನೆ ನಂಬ್ರ 403 ರ ನಿವಾಸಿ ರುಬಾಯತ್ ಬಾನು (33) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಗೃಹಿಣಿಯಾಗಿರುವ ಇವರು ನ 17 ರಂದು ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ 10 ಗಂಟೆಗೆ ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿ ಬಳಿ ಇಟ್ಟು ಹೋಗಿದ್ದರು. ಮಧ್ಯಾಹ್ನ 1.30 ರ ವೇಳೆಗೆ ಬಂದು ನೋಡಿದಾಗ ಕಿಟಕಿಯಲ್ಲಿಟ್ಟಿದ್ದ ಅದೇ ಕೀಯನ್ನು ಬಳಸಿದ ಕಳ್ಳರು ಮನೆಯೊಳಗೆ ಪ್ರವೇಶಿಸಿ ಕಪಾಟಿನ ಲಾಕರಿನ ಕೀ ತೆಗೆದು ಲಾಕರಿನಲ್ಲಿದ್ದ 40 ಸಾವಿರ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಚಿನ್ನದ ಬಳೆ, 15 ಸಾವಿರ ರೂಪಾಯಿ ಮೌಲ್ಯದ 2 ಚಿನ್ನದ ಕಿವಿಯೋಲೆ, 6 ಸಾವಿರ ರೂಪಾಯಿ ಮೌಲ್ಯದ 2 ಬೆಳ್ಳಿಯ ಕಾಲು ಚೈನ್, 10 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಉಂಗುರ, 20 ಸಾವಿರ ರೂಪಾಯಿ ನಗದು, ಎ ಆಂಡ್ ಐ ಬ್ಯಾಂಕ್ ಪುಸ್ತಕ ಮತ್ತು ಚೆಕ್ ಬುಕ್ ಕಳವುಗೈದಿದ್ದಾರೆ. 

ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 82 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪುದು : ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು Rating: 5 Reviewed By: karavali Times
Scroll to Top