ಮನೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಜಾತಿನಿಂದನೆಗೈದ ಆರೋಪಿ ಬಂಧಿಸಿದ ಕಡಬ ಪೊಲೀಸರು - Karavali Times ಮನೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಜಾತಿನಿಂದನೆಗೈದ ಆರೋಪಿ ಬಂಧಿಸಿದ ಕಡಬ ಪೊಲೀಸರು - Karavali Times

728x90

16 November 2025

ಮನೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಜಾತಿನಿಂದನೆಗೈದ ಆರೋಪಿ ಬಂಧಿಸಿದ ಕಡಬ ಪೊಲೀಸರು

ಕಡಬ, ನವೆಂಬರ್ 17, 2025 (ಕರಾವಳಿ ಟೈಮ್ಸ್) : ಮನೆಯ ಹೊರಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಲ್ಲದೆ ಜಾತಿ ನಿಂದನೆಗೈದ ಘಟನೆ ನ 13 ರಂದು ನಡೆದಿದ್ದು, ಆರೋಪಿಯನ್ನು ನ 16 ರಂದು ಕಡಬ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಕಡಬ ನಿವಾಸಿ ಉಮೇಶ್ ಗೌಡ ಎಂದು ಹೆಸರಿಸಲಾಗಿದೆ. ಸಂತ್ರಸ್ತ ಮಹಿಳೆಯು  ಕಡಬ ಠಾಣಾ ವ್ಯಾಪ್ತಿಯಲ್ಲಿ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು, ನ 13 ರಂದು ರಾತ್ರಿ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ ಆರೋಪಿತ ವ್ಯಕ್ತಿ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುತ್ತಾನೆ. ಈ ಸಂದರ್ಭ ಮಹಿಳೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದು, ಮನೆಯೊಳಗಿದ್ದ ಗಂಡ ಹಾಗೂ ಮಕ್ಕಳು ಓಡಿಕೊಂಡು ಬಂದಿದ್ದಾರೆ. ಈ ವೇಳೆ ಆರೋಪಿ ಓಡಿ ಹೋಗಲು ಪ್ರಯತ್ನಿಸಿದ್ದು, ಕೂಡಲೇ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಎಲ್ಲರಿಗೂ ಹಲ್ಲೆ ನಡೆಸಿರುತ್ತಾನೆ. ಸ್ಥಳದಿಂದ ಆರೋಪಿ ಪರಾರಿಯಾಗುವ ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂತ್ರಸ್ತ ಮಹಿಳೆಗೆ ಜಾತಿ ನಿಂದನೆ ಮಾಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣದ ತನಿಖೆ ನಡೆಸಿದ ಕಡಬ ಪೊಲೀಸರು ನ 16 ರಂದು ಆರೋಪಿ ಕಡಬ ನಿವಾಸಿ ಉಮೇಶ್ ಗೌಡ ಎಂಬಾತನನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮನೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಜಾತಿನಿಂದನೆಗೈದ ಆರೋಪಿ ಬಂಧಿಸಿದ ಕಡಬ ಪೊಲೀಸರು Rating: 5 Reviewed By: karavali Times
Scroll to Top