ಬಂಟ್ವಾಳ, ನವೆಂಬರ್ 13, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಳಗಿನ ಮಂಡಾಡಿ 2ನೇ ವಾರ್ಡಿನ ಸದಸ್ಯ ಪುರುಷೋತ್ತಮ ಎಸ್ ಬಂಗೇರ ಅವರ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ಉದ್ಘಾಟಿಸಿದರು.
ಈ ಸಂದರ್ಭ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ ಮೊಹಮ್ಮದ್ ಇಕ್ಬಾಲ್ ಜೆಟಿಟಿ, ಪ್ರಮುಖರಾದ ಬಿ ಆರ್ ಅಂಚನ್, ಕುಶಾಲ್ ಕರ್ಕೇರ, ದೇವದಾಸ್ ಕುಲಾಲ್, ವೆಂಕಪ್ಪ ಕುಲಾಲ್, ವೆಂಕಪ್ಪ ಪೂಜಾರಿ, ಹರಿಶ್ಚಂದ್ರ ಆಚಾರ್ಯ, ರಾಜೇಶ್ ರೋಡ್ರಿಗಸ್, ನೀತೇಶ್ ಕುಲಾಲ್, ಅಮ್ಮಣ್ಣ ಅರ್ಬಿಗುಡ್ಡೆ, ಗಣೇಶ್ ಕುಲಾಲ್, ಲೋಕೇಶ್, ಸತೀಶ್ ಮಂಡಾಡಿ, ಪುರುಷೋತ್ತಮ ಎಸ್ ಬಿ, ರಂಜಿತ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

















0 comments:
Post a Comment