ಬಂಟ್ವಾಳ, ನವೆಂಬರ್ 04, 2025 (ಕರಾವಳಿ ಟೈಮ್ಸ್) : ಮಾಣಿ ಫ್ಲೈ ಓವರ್ ಮೇಲೆ ರಸ್ತೆ ಡಿವೈಡರಿಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ನ 1 ರಂದು ರಾತ್ರಿ ವೇಳೆ ಸಂಭವಿಸಿದೆ.
ಗಾಯಗೊಂಡವರನ್ನು ಅಬ್ದುಲ್ಲ ಅಫ್ಝಲ್ ಹಾಗೂ ಫಾರಿಶ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಉಳ್ಳಾಲ ಬಸ್ತಿಪಡ್ಪು ನಿವಾಸಿ ಅಫ್ರಿನಾ (23) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ತಮ್ಮ ಸ್ನೆಹಿತೆ ಖತೀಜಾ ಆಫ್ರಿನಾ ಮತ್ತು ಆಕೆಯ ತಮ್ಮ ಅಬ್ದುಲ್ಲಾ ಅಫ್ಜಲ್ ಮತ್ತು ಆತನ ಸ್ನೇಹಿತ ಫಾರಿಷ್ ಅವರು ಪ್ರಯಾಣಿಕರಾಗಿ, ಮಹಮ್ಮದ್ ಅನ್ಸಾರ್ ಎಂಬವರು ಚಾಲಕರಾಗಿ ಕೆಎ19 ಎಂಕೆ0458 ನೋಂದಣಿ ಸಂಖ್ಯೆಯ ಕಾರಿನಲ್ಲಿ ನ 1 ರಂದು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೊರಟು ರಾತ್ರಿ 9 ಗಂಟೆಗೆ ಮಾಣಿ ಫ್ಲೈ ಓವರ್ ಮೇಲೆ ತಲುಪಿದಾಗ ಕಾರು ರಸ್ತೆಯ ಬಲಬದಿಯ ಡಿವೈಡರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಕಾರಿನ ಹಿಂಬದಿ ಕುಳಿತಿದ್ದ ಅಬ್ದುಲ್ಲಾ ಅಫ್ಜಲ್ ಹಾಗೂ ಫಾರಿಸ್ ಅವರು ಗಾಯಗೊಂಡಿದ್ದಾರೆ. ಇತರರು ಯಾವುದೆ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment