ಬಂಟ್ವಾಳ, ನವೆಂಬರ್ 04, 2025 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿದ ಅಟೋ ರಿಕ್ಷಾ ರಸ್ತೆ ಬದಿ ಗುಂಡಿಗೆ ಬಿದ್ದು ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ನ 2 ರಂದು ರಾತ್ರಿ ಸಂಭವಿಸಿದೆ.
ಗಾಯಾಳು ಪ್ರಯಾಣಿಕನನ್ನು ನೀರಪಾದೆ ಕ್ವಾಟ್ರಸ್ ನಿವಾಸಿ ದಿವಂಗತ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ಮಜೀದ್ (64) ಎಂದು ಹೆಸರಿಸಲಾಗಿದೆ. ಇವರು ನ 2 ರಂದು ಕೆಲಸದ ನಿಮಿತ್ತ ಬಿ ಸಿ ರೋಡಿಗೆ ಹೋಗಿ ಕೆಲಸ ಮುಗಿಸಿ ವಾಪಸ್ ಖಾಸಗಿ ಬಸ್ಸಿನಲ್ಲಿ ಬಿ ಸಿ ರೋಡಿನಿಂದ ಬಂದು ದಾಸಕೋಡಿಯಲ್ಲಿ ಇಳಿದು ಮನೆಯಾದ ನೀರಪಾದೆ ಕಡೆಗೆ ಹೋಗಲು ಕಲ್ಲಡ್ಕ ಕಡೆಯಿಂದ ಬಂದ ಕೆಎ 70 2868 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಎದುರಿನ ಸೀಟಿನಲ್ಲಿ ಅಂದರೆ ಚಾಲಕನ ಪಕ್ಕ ಕುಳಿತುಕೊಂಡು ದಾಸಕೋಡಿ ಕಡೆಯಿಂದ ನೀರಪಾದೆ ಕಡೆಗೆ ಹೋಗುವಾಗ ರಾತ್ರಿ 9 ಗಂಟೆ ವೇಳೆಗೆ ನೀರಪಾದೆ ಎಂಬಲ್ಲಿನ ತಿರುವು ರಸ್ತೆಗೆ ತಲುಪುತ್ತಿದ್ದಂತೆ ಅಟೋ ರಿಕ್ಷಾ ಚಾಲಕ ಹರಿಕೃಷ್ಣ ಅವರ ನಿಯಂತ್ರಣ ಮೀರಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ.
ಅಪಘಾತದಿಂದ ಪ್ರಯಾಣಿಕ ಅಬ್ದುಲ್ ಮಜೀದ್ ಅವರ ಬಲ ಕಾಲಿನ ಕೋಲು ಕಾಲಿಗೆ ಗಾಯವಾಗಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟೋ ರಿಕ್ಷಾ ಚಾಲಕ ಹರಿಕೃಷ್ಣ ಹಾಗೂ ಹಿಂಬದಿ ಸೀಟಿನಲ್ಲಿದ್ದ ಅಶೋಕ್ ಮತ್ತು ವಿಜೇತಾ ಅವರಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment