ಬಂಟ್ವಾಳ, ನವೆಂಬರ್ 03, 2025 (ಕರಾವಳಿ ಟೈಮ್ಸ್) : ಇಲ್ಲಿನ ವಿದ್ಯಾಗಿರಿ ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಎನ್ ಸಿ ಸಿ ನೌಕಾದÀಳ ಘಟಕದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಮಂಗಳೂರು 5 ಕೆಎಆರ್ ನೌಕಾದಳ ಘಟಕದ ಕಮಾಂಡಿಂಗ್ ಅಧಿಕಾರಿ ಸಿಡಿಆರ್ ಲಿಬಿನ್ ಆರ್ ಜಾನ್ಸನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ಶಿಸ್ತು ಮತ್ತು ಶೌರ್ಯವನ್ನು ಬೆಳೆಸುವಲ್ಲಿ ನೌಕಾದಳ ಘಟಕದ ಪಾತ್ರ ಮಹತ್ವದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮಾತನಾಡಿ, ಬಂಟ್ವಾಳ ತಾಲೂಕಿನಲ್ಲಿ ಎನ್ ಸಿ ಸಿ ಘಟಕ ನಡೆಸಲು ಅವಕಾಶ ಪಡೆದ ಮೊದಲ ಶಾಲೆ ಎಂಬ ಕೀರ್ತಿಯನ್ನು ಈ ಶಾಲೆ ಪಡೆದಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಹರಿಪ್ರಸಾದ್, ಬಿ ಆರ್ ಎಂ ಪಿ ಶಾಲಾ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್ ಉಪಸ್ಥಿತರಿದ್ದರು. ಕು ದೃಶ್ಯ ಸ್ವಾಗತಿಸಿ, ಸಿಟಿಒ ರತ್ನಾಕರ ವಂದಿಸಿದರು. ಜೋಸೆಲ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.











0 comments:
Post a Comment