ಬಂಟ್ವಾಳ, ನವೆಂಬರ್ 03, 2025 (ಕರಾವಳಿ ಟೈಮ್ಸ್) : ಕನ್ನಡ ಕೇವಲ ಭಾಷೆಯಲ್ಲ ಅಸ್ಮಿತೆ. ಕನ್ನಡ ಭಾಷೆಯನ್ನು ಓದಿದವನು ಕವಿಯೂ ಆಗಬಹುದು. ಕಲಿಯೂ ಆಗಬಹುದು ಎಂದು ಬಿ ಆರ್ ಎಂ ಪಿ ಸಿ ಶಾಲಾ ಕನ್ನಡ ಶಿಕ್ಷಕ ಮನೋಹರ ಎಸ್ ದೊಡ್ಡಮನಿ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಕನ್ನಡ ಸಂಘ ಹಾಗೂ ಐಕ್ಯೂಎಸಿ ಕೋಶಗಳ ಆಶ್ರಯದಲ್ಲಿ ನಡೆದ ಕನ್ನಡ ನಾಡು-ನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಎಂ ಡಿ ಅವರು ಮಾತನಾಡಿ, ಮನುಷ್ಯನನ್ನು ಉತ್ತುಂಗ ಸ್ಥಿತಿಗೇರಿಸುವ ಶಕ್ತಿ ಸಾಹಿತ್ಯಕ್ಕಿದೆ. ಇಂದಿನ ವಿದ್ಯಾರ್ಥಿಗಳು ಭಾಷಾಭಿಮಾನ ಬೆಳೆಸಿಕೊಳ್ಳುವುದರೊಂದಿಗೆ ಸಾಹಿತ್ಯಾಧ್ಯಯನವನ್ನು ಮಾಡಬೇಕು ಎಂದರು.
ಐಕ್ಯುಎಸಿ ಸಂಚಾಲಕ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣ ಪ್ರಭು ಸ್ವಾಗತಿಸಿ, ಯಕ್ಷಿತಾ ವಂದಿಸಿದರು. ಸ್ಭೂರ್ತಿ ಎಂ ಕಾರ್ಯಕ್ರಮ ನಿರೂಪಿಸಿದರು. ವಂದಿತ ಮತ್ತು ಸಂಗಡಿಗರು ಆಶಯ ಗೀತೆ ಹಾಡಿದರು.












0 comments:
Post a Comment