ಬಂಟ್ವಾಳ, ನವೆಂಬರ್ 17, 2025 (ಕರಾವಳಿ ಟೈಮ್ಸ್) : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಯುವಕಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಹಾಗೂ ಸ್ಕೂಟರ್ ಸವಾರ ಇಬ್ಬರೂ ಗಾಯಗೊಂಡ ಘಟನೆ ಪಾಣೆಮಂಗಳೂರು ಹೆದ್ದಾರಿಯ ಟೀ ಟೈಮ್ ಹೋಟೆಲ್ ಬಳಿ ನ 16 ರಂದು ಮಧ್ಯರಾತ್ರಿ ವೇಳೆ ಸಂಭವಿಸಿದೆ.
ಗಾಯಗೊಂಡ ಪಾದಚಾರಿ ವ್ಯಕ್ತಿಯನ್ನು ಬಿ ಸಿ ರೋಡು ಕೈಕಂಬ ಎಸ್ ಮಂಝಿಲ್ ನಿವಾಸಿ ಕೆ ಯು ಎಂ ಶರೀಫ್ ಅವರ ಪುತ್ರ ಇಬ್ರಾಹಿಂ ಶಾಹೀಲ್ (20) ಹಾಗೂ ಸ್ಕೂಟರ್ ಸವಾರ ಮೊಹಮ್ಮದ್ ಶಾಜಾದ್ ಎಂದು ಹೆಸರಿಸಲಾಗಿದೆ.
ಇಬ್ರಾಹಿಂ ಶಾಹೀಲ್ ಅವರು ನ 16 ರಂದು ರಾತ್ರಿ ಸ್ನೇಹಿತರ ಜೊತೆ ಟೀ ಟೈಮ್ ಹೋಟೆಲಿನಲ್ಲಿ ಉಪಹಾರ ಸೇವಿಸಿ ಬಳಿಕ ವಾಪಾಸು ಜೈನರಪೇಟೆಯಲ್ಲಿ ಪ್ರಸ್ತುತ ವಾಸವಿರುವ ಬಾಡಿಗೆ ಮನೆ ಕಡೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನರಿಕೊಂಬು ಗ್ರಾಮದ ಇಂಟರ್ ಸ್ಟೈಲ್ ಸಿರಾಮಿಕ್ ಹಾಗೂ ಗ್ರಾನೈಟ್ ಸೆಂಟರ್ ಮುಂಭಾಗ ತಲುಪಿದಾಗ ರಾತ್ರಿ 12 ಗಂಟೆ ವೇಳೆಗೆ ಮೆಲ್ಕಾರ್ ಕಡೆಯಿಂದ ಬಿ ಸಿ ರೋಡು ಕಡೆಗೆ ಮೊಹಮ್ಮದ್ ಶಾಜಾದ್ ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಪದಾಚಾರಿ ಇಬ್ರಾಹಿಂ ಶಾಹೀಲ್ ಹಾಗೂ ಶಾಜಾದ್ ಇಬ್ಬರಿಗೂ ಗಾಯಗಳಾಗಿವೆ. ಇಬ್ರಾಹಿಂ ಶಾಹೀಲ್ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಕೂಟರ್ ಸವಾರ ಮೊಹಮ್ಮದ್ ಶಾಜಾದ್ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆ ಯೇನಪೆÇೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment