ಬಂಟ್ವಾಳ, ಡಿಸೆಂಬರ್ 04, 2025 (ಕರಾವಳಿ ಟೈಮ್ಸ್) : ಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರ್ತಿ, ಸುರತ್ಕಲ್ ಸಮೀಪದ ಇಡ್ಯಾ ನಿವಾಸಿ ಧನಲಕ್ಷ್ಮೀ ಪೂಜಾರಿ ಅವರು ಮಾಜಿ ಸಚಿವ ಬಿ ರಮಾನಾಥ ರೈ ಅವರ ಕಳ್ಳಿಗೆ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದರು.
ಈ ಸಂದರ್ಭ ಧನಲಕ್ಷ್ಮೀ ಪೂಜಾರಿ ಅವರನ್ನು ಮಾಜಿ ಸಚಿವ ರಮಾನಾಥ ರೈ ದಂಪತಿ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ರಮಾನಾಥ ರೈ ಅವರು, ಭಾರತವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸಲು ಕರ್ನಾಟಕದಿಂದ ಏಕೈಕ ಕ್ರೀಡಾಪಟು ಆಯ್ಕೆಯಾಗಿದ್ದಲ್ಲದೆ ಅವರು ನಮ್ಮ ತುಳುನಾಡಿನವರು ಎಂಬುದು ಅತ್ಯಂತ ಖುಷಿ ತಂದಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭ ರಮಾನಾಥ ರೈ ಅವರ ಪತ್ನಿ ಧನಭಾಗ್ಯ ಆರ್ ರೈ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಧನಲಕ್ಷ್ಮೀ ಪೂಜಾರಿ ಅವರ ಪೆÇೀಷಕರಾದ ಇಡ್ಯಾ ನಾರಾಯಣ ಪೂಜಾರಿ ಹಾಗೂ ಶಶಿಕಲಾ ದಂಪತಿಗಳು ಉಪಸ್ಥಿತರಿದ್ದರು.














0 comments:
Post a Comment