ಬಂಟ್ವಾಳ, ಡಿಸೆಂಬರ್ 04, 2025 (ಕರಾವಳಿ ಟೈಮ್ಸ್) : ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಡಿ 2 ರಂದು ಸಂಭವಿಸಿದೆ.
ಗಾಯಾಳು ಪಾದಚಾರಿ ವ್ಯಕ್ತಿಯನ್ನು ಮಾರಿಪಳ್ಳ ನಿವಾಸಿ ಅಬೂಬಕ್ಕರ್ ಪಿ (69) ಎಂದು ಹೆಸರಿಸಲಾಗಿದೆ. ಇವರು ಡಿ 2 ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಮಾರಿಪಳ್ಳ ಬಸ್ ಸ್ಟ್ಯಾಂಡ್ ಕಡೆಯಿಂದ ತಮ್ಮ ಮನೆಯಾದ ಮಾರಿಪಳ್ಳ ದೇವಸ್ಯ ರಸ್ತೆಯ ಕಡೆಗೆ ಹೊಗುವರೇ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ಮಾರಿಪಳ್ಳ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಬಂದ ಮನ್ವಿತ್ ಎಂಬವರು ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಅಬೂಬಕ್ಕರ್ ಅವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರಾದ ಜಲೀಲ್ ಹಾಗೂ ಮಹಮ್ಮದ್ ಎಂಬವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment