ಪುತ್ತೂರು, ಡಿಸೆಂಬರ್ 04, 2025 (ಕರಾವಳಿ ಟೈಮ್ಸ್) : ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ ಡಿಸೆಂಬರ್ 8 ರಂದು ಪೂರ್ವಾಹ್ನ 11 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಈ ಅದಾಲತ್ತಿನಲ್ಲಿ ಪುತ್ತೂರು ಅಂಚೆ ವಿಭಾಗದಿಂದ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವ ಅಂಚೆ ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಶೀಲಿಸಲಾಗುವುದು.
ಕುಂದು ಕೊರತೆಗಳನ್ನು ಕಳುಹಿಸಲು ಇಚ್ಚಿಸುವ ಅಂಚೆ ಪಿಂಚಣಿದಾರರು ಬರಹ ಮೂಲಕ ಡಿ 8 ರ ಮೊದಲು ತಲುಪುವಂತೆ ಪುತ್ತೂರು ವಿಭಾಗದ ಅಂಚೆ ಅಧೀಕ್ಷಕರು, ಪುತ್ತೂರು 574201 ಇವರಿಗೆ `ಪಿಂಚಣಿ ಅದಾಲತ್‍ನಲ್ಲಿ ವಿಚಾರಣೆಗಾಗಿ’ ಎಂಬ ಮೇಲ್ಬರಹ ಹೊಂದಿದ ಲಕೋಟೆಯಲ್ಲಿ ಕಳುಹಿಸಬಹುದು. ಡಿ ರಂದು 11 ಗಂಟೆಗೆ ಕಚೇರಿಯಲ್ಲಿ ಹಾಜರಿದ್ದರೆ ಸಮಕ್ಷಮ ಪರಿಶೀಲಿಸಲು ಅನುಕೂಲವಾಗುವುದು ಎಂದು ಪುತ್ತೂರು ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.














0 comments:
Post a Comment