ಬಂಟ್ವಾಳ, ಡಿಸೆಂಬರ್ 03, 2025 (ಕರಾವಳಿ ಟೈಮ್ಸ್) : ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿಯಾಳ ಗ್ರಾಮದ ಕುಕ್ಕೇರಿ ಎಂಬಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ರಾಜೇಶ್ ಪೂಜಾರಿ (34) ಎಂದು ಹೆಸರಿಸಲಾಗಿದೆ. ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಈತ ಅದೇ ಕಾರಣಕ್ಕೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಡಿ 1 ರ ರಾತ್ರಿ 10 ಗಂಟೆಯಿಂದ ಡಿ 2 ರ ಬೆಳಗ್ಗಿನ ಜಾವ 1.45 ರ ಮಧ್ಯದ ಅವಧಿಯಲ್ಲಿ ಮನೆಯ ಬಚ್ಚಲು ಕೋಣೆಯ ಮರದ ಪಕ್ಕಾಸಿಗೆ ಚೂಡಿದಾರ ಶಾಲಿನಿಂದ ನೇಣು ಬಿಗಿದು ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಮೃತರ ಸಹೋದರ ಲಲಿತಾ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment