ಜನವರಿ 9-10 ರಂದು ಉಸ್ತುವಾರಿ ಸಚಿವ ಗುಂಡೂರಾವ್ ಜಿಲ್ಲಾ ಪ್ರವಾಸ - Karavali Times ಜನವರಿ 9-10 ರಂದು ಉಸ್ತುವಾರಿ ಸಚಿವ ಗುಂಡೂರಾವ್ ಜಿಲ್ಲಾ ಪ್ರವಾಸ - Karavali Times

728x90

7 January 2026

ಜನವರಿ 9-10 ರಂದು ಉಸ್ತುವಾರಿ ಸಚಿವ ಗುಂಡೂರಾವ್ ಜಿಲ್ಲಾ ಪ್ರವಾಸ

ಮಂಗಳೂರು, ಜನವರಿ 08, 2026 (ಕರಾವಳಿ ಟೈಮ್ಸ್) : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜನವರಿ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. 

ಜನವರಿ 9 ರಂದು ಬೆಳಿಗ್ಗೆ 9.5ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಚಿವರು, 9:30ಕ್ಕೆ ನಗರದ ಕದ್ರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. 10 ಗಂಟೆಗೆ ಲಾಲ್ ಭಾಗ್ ಕರಾವಳಿ ಮೈದಾನದ ಎದುರು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸತಿಗೃಹ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸುವರು. ಬೆಳಿಗ್ಗೆ 11 ಗಂಟೆಗೆ ಪಿಲಿಕುಳ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಭವನದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಹಕ್ಕಿ ಹಬ್ಬ 12ನೇ ಆವೃತ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 11.45ಕ್ಕೆ ಪಡೀಲ್ ಪ್ರಜಾ ಸೌಧದಲ್ಲಿ ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ ಉದ್ಘಾಟಿಸುವರು. ಮಧ್ಯಾಹ್ನ 12.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ ವೆನ್ ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆಗಳ ಸಹಭಾಗಿತ್ವದ ಕುರಿತು ಸಭೆಯಲ್ಲಿ ಭಾಗವಹಿಸುವರು. 2.05ಕ್ಕೆ ಉಡುಪಿ ಜಿಲ್ಲೆಗೆ ತೆರಳುವರು. 

ಜನವರಿ 10 ರಂದು ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ  ಕೋಸ್ಟಲ್ ಕರ್ನಾಟಕ ಟೂರಿಸಂ ಸಮಾವೇಶ ಸಂಜೆ 6 ಗಂಟೆಗೆ ನರಿಂಗಾನದಲ್ಲಿ ನಡೆಯುವ 4ನೇ ಹೊನಲು ಬೆಳಕಿನ ಲವ-ಕುಶ ಜೋಡು ಕರೆ ಕಂಬಳ  ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರ ದಿನೇಶ್ ಗುಂಡೂರಾವ್ ಜನವರಿ 11 ರಂದು ಬೆಳಿಗ್ಗೆ 6.15ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜನವರಿ 9-10 ರಂದು ಉಸ್ತುವಾರಿ ಸಚಿವ ಗುಂಡೂರಾವ್ ಜಿಲ್ಲಾ ಪ್ರವಾಸ Rating: 5 Reviewed By: karavali Times
Scroll to Top