ಜನವರಿ 4 ರಂದು ಕುಕ್ಕಾಜೆಯಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ - Karavali Times ಜನವರಿ 4 ರಂದು ಕುಕ್ಕಾಜೆಯಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ - Karavali Times

728x90

2 January 2026

ಜನವರಿ 4 ರಂದು ಕುಕ್ಕಾಜೆಯಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ

ಬಂಟ್ವಾಳ, ಜನವರಿ 02, 2026 (ಕರಾವಳಿ ಟೈಮ್ಸ್) : ಇಂದಿರಾ ದರ್ಶಿನಿ ಸಹಕಾರಿ ಸಂಘ (ನಿ) ಇದರ ಉದ್ಘಾಟನಾ ಸಮಾರಂಭ ಜನವರಿ 4 ರಂದು ಭಾನುವಾರ 10.30ಕ್ಕೆ ಕುಕ್ಕಾಜೆ-ಪತ್ತುಮುಡಿ ಎಂಬಲ್ಲಿನ ಅಲೀಮಾ ಪ್ಲಾಝಾ ಸಂಕೀರ್ಣದಲ್ಲಿ ನಡೆಯಲಿದೆ. 

ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಅವರು ಸಹಕಾರಿ ಸಂಘ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ ರಮಾನಾಥ ರೈ ಅವರು ಆಡಳಿತ ಕಚೇರಿ ಉದ್ಘಾಟಿಸುವರು. ಇಂದಿರಾ ದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ಬಿ ಉಮ್ಮರ್ ಅಧ್ಯಕ್ಷತೆ ವಹಿಸುವರ. ಮುಖ್ಯ ಅತಿಥಿಗಳಾಗಿ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ಸಹಕಾರಿ ಸಂಘಗಳ ಉಪನಿಬಂಧಕ ಎಚ್ ಎನ್ ರಮೇಶ್, ಉಳ್ಳಾಲ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಸಹಿತ ಹಲವು ಗಣ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜನವರಿ 4 ರಂದು ಕುಕ್ಕಾಜೆಯಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ Rating: 5 Reviewed By: karavali Times
Scroll to Top