ಕೈಕುಂಜೆ : ಡಾ ಗೀತಾ ಎನ್ ಅವರ ಹಕ್ಕಿಮರಿ ಮತ್ತು ಕಿಶೋರ ಗೀತೆಗಳು ಕವನ ಸಂಕಲ ಬಿಡುಗಡೆ - Karavali Times ಕೈಕುಂಜೆ : ಡಾ ಗೀತಾ ಎನ್ ಅವರ ಹಕ್ಕಿಮರಿ ಮತ್ತು ಕಿಶೋರ ಗೀತೆಗಳು ಕವನ ಸಂಕಲ ಬಿಡುಗಡೆ - Karavali Times

728x90

13 January 2026

ಕೈಕುಂಜೆ : ಡಾ ಗೀತಾ ಎನ್ ಅವರ ಹಕ್ಕಿಮರಿ ಮತ್ತು ಕಿಶೋರ ಗೀತೆಗಳು ಕವನ ಸಂಕಲ ಬಿಡುಗಡೆ

 ಬಂಟ್ವಾಳ, ಜನವರಿ 13, 2026 (ಕರಾವಳಿ ಟೈಮ್ಸ್) : ಡಾ. ಗೀತಾ ಎನ್. ಅವರ ಹಕ್ಕಿಮರಿ ಮತ್ತು ಇತರ ಕಿಶೋರ ಗೀತೆಗಳು ಕವನ ಸಂಕಲನವು ಬಿ ಸಿ ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಲೊಕಾರ್ಪಣೆಗೊಂಡಿತು. 

ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ವಿಶ್ವನಾಥ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪರಮೇಶ್ವರ ಜಿ ಹೆಗಡೆ ಕೃತಿ ಬಿಡುಗಡೆಗೊಳಿಸಿದರು. ಉಪನ್ಯಾಸಕ ವಿಶ್ವನಾಥ್ ಶುಭ ಹಾರೈಸಿದರು. ಕೃತಿ ಕುರಿತು ಮುನ್ನುಡಿ ಬರೆದಿರುವ ಆಂಗ್ಲ ಭಾಷಾ ಉಪನ್ಯಾಸಕ, ಸಾಹಿತಿ ರಾಧೇಶ ತೋಳ್ಪಾಡಿ ಕೃತಿ ಬಗ್ಗೆ ಮಾತನಾಡಿದರು. 

ಇದೇ ವೇಳೆ ಪವಿತ್ರಾ ಮಯ್ಯ ಮತ್ತು ಬಳಗದವರಿಂದ  ಭಾವಗೀತೆ ಮತ್ತು ಕಿಶೋರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಪಾಣೆಮಂಗಳೂರು ಬೊಂಡಾಲದ ಪರ್ಲಮಜಲಿನ ಶ್ರೀ ದುರ್ಗಾ ಕಲಾರಾಧನಾ ಬಳಗದ ವತಿಯಿಂದ ಲೇಖಕಿಯನ್ನು ಸನ್ಮಾನಿಸಲಾಯಿತು.

ಮಾಧವ ರಾವ್ ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಭಾಸ್ಕರ ರಾವ್ ಪರ್ಲಮಜಲು ವಂದಿಸಿದರು. ಹೇಮಾ ರವಿಚಂದ್ರ ಮಯ್ಯ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಕೈಕುಂಜೆ : ಡಾ ಗೀತಾ ಎನ್ ಅವರ ಹಕ್ಕಿಮರಿ ಮತ್ತು ಕಿಶೋರ ಗೀತೆಗಳು ಕವನ ಸಂಕಲ ಬಿಡುಗಡೆ Rating: 5 Reviewed By: karavali Times
Scroll to Top