ಮಂಗಳೂರು ವಿಮಾನ ನಿಲ್ದಾಣ ಲಿ ಹಾಗೂ ಸಂಚಾರಿ ಪೊಲೀಸರ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ - Karavali Times ಮಂಗಳೂರು ವಿಮಾನ ನಿಲ್ದಾಣ ಲಿ ಹಾಗೂ ಸಂಚಾರಿ ಪೊಲೀಸರ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ - Karavali Times

728x90

13 January 2026

ಮಂಗಳೂರು ವಿಮಾನ ನಿಲ್ದಾಣ ಲಿ ಹಾಗೂ ಸಂಚಾರಿ ಪೊಲೀಸರ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಮಂಗಳೂರು, ಜನವರಿ 13, 2026 (ಕರಾವಳಿ ಟೈಮ್ಸ್) : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್, ಮಂಗಳೂರು ನಗರ ಸಂಚಾರ ಪೆÇಲೀಸರ ಸಹಯೋಗದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ವಿಮಾನ ನಿಲ್ದಾಣದ ಏಕಲವ್ಯ ತರಬೇತಿ ಸಭಾಂಗಣದಲ್ಲಿ ಜನವರಿ 13 ರಂದು ನಡೆಯಿತು. 

ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿ ಬಿನು ವರ್ಗೀಸ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಉತ್ತರ ಸಂಚಾರ ಪೆÇಲೀಸ್ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಮುಗ್ಗಳ್ಳ್ದಿವರು, ಎಲ್ಲಾ ಸಮಯದಲ್ಲೂ ಸಂಚಾರ ನಿಯಮಗಳನ್ನು ಪಾಲಿಸುವ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಹಿಂಬದಿ ಸವಾರರ ಅಪಾಯಗಳ ಕುರಿತು ರೋಲ್ ಪ್ಲೇ ಮತ್ತು ಸಂಚಾರ ನಿಯಮಗಳ ಕುರಿತು ರ್ಯಾಪಿಡ್ ಫೈರ್ ಆನ್ ಲೈನ್ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು. ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸುವಂತೆ ಒತ್ತಾಯಿಸುವ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ವಿಮಾನ ನಿಲ್ದಾಣ ಲಿ ಹಾಗೂ ಸಂಚಾರಿ ಪೊಲೀಸರ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ Rating: 5 Reviewed By: karavali Times
Scroll to Top