ಪುತ್ತೂರು 1 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒರಿಸ್ಸಾ ಮೂಲದ ಸಪ್ಲೈಯರ್ ಸಹಿತ ಮೂವರ ಬಂಧನ - Karavali Times ಪುತ್ತೂರು 1 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒರಿಸ್ಸಾ ಮೂಲದ ಸಪ್ಲೈಯರ್ ಸಹಿತ ಮೂವರ ಬಂಧನ - Karavali Times

728x90

7 February 2026

ಪುತ್ತೂರು 1 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒರಿಸ್ಸಾ ಮೂಲದ ಸಪ್ಲೈಯರ್ ಸಹಿತ ಮೂವರ ಬಂಧನ

ಪುತ್ತೂರು, ಫೆಬ್ರವರಿ 07, 2026 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 19 ರಂದು 53.03 ಲಕ್ಷ ರೂಪಾಯಿ ಮೌಲ್ಯದ 1.6.50 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ಮುಂದುವರಿಸಿದ ಪೊಲೀಸರು ಪ್ರಕರಣದ ಆರೋಪಿಗಳಿಗೆ ಗಾಂಜಾ ಸಪ್ಲೈ ಮಾಡಿದ ಹಾಗೂ ಹಣ ಮತ್ತು ವಾಹನದ ವ್ಯವಸ್ಥೆ ಮಾಡಿದ ಒರಿಸ್ಸಾ ಮೂಲದ ವ್ಯಕ್ತಿ ಸೇರಿದಂತೆ ಒಟ್ಟು ಮೂವರನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. 

ಆರೋಪಿಗಳಿಗೆ ಹಣ ಮತ್ತು ವಾಹನದ ವ್ಯವಸ್ಥೆ ಮಾಡಿದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ ಕೆ (27) ಹಾಗೂ ಕಕ್ಕಿಂಜೆ ನಿವಾಸಿ ನಝೀರ್ (42) ಮತ್ತು ಆರೋಪಿಗಳಿಗೆ ಮಾದಕ ವಸ್ತು ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂದು ಹೆಸರಿಸಲಾಗಿದೆ. 

ಪುತ್ತೂರು ಎಎಸ್ಪಿ ಪ್ರಮೋದ್ ಕುಮಾರ್ ಅವರ ನೇತೃತ್ವ ತನಿಖಾ ತಂಡವು ಒರಿಸ್ಸಾ ರಾಜ್ಯಕ್ಕೆ ತೆರಳಿ ದೀಪಕ್ ಪಾತ್ರ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಈ ವೇಳೆ ಆತನಿಂದ 80 ಸಾವಿರ ರೂಪಾಯಿ ಮೌಲ್ಯದ 1.788 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

ಕಾರ್ಯಾಚರಣೆಯಲ್ಲಿ ಪುತ್ತೂರು ಎಎಸ್ಪಿ ಪ್ರಮೋದ್ ಕುಮಾರ್ ಅವರು, ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ಪಿಎಸ್ಸೈ ಗುಣಪಾಲ ಜೆ ಅವರು ಹಾಗೂ ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೇನ್, ಸುರೇಶ ಹಾಗೂ ದಿವ್ಯಾ ಪ್ರಕಾಶ್ ಅವರುಗಳನ್ನೊಳಗೊಂಡ ತಂಡ ಭಾಗಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು 1 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒರಿಸ್ಸಾ ಮೂಲದ ಸಪ್ಲೈಯರ್ ಸಹಿತ ಮೂವರ ಬಂಧನ Rating: 5 Reviewed By: karavali Times
Scroll to Top