ಮಂಗಳೂರು, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಕಂಕನಾಡಿ ನಗರ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾದ ಬಳಿಕ 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ, ವಟ್ಟಕ್ಕಟ್ಟು ಜಂಕ್ಷನ್ ಹತ್ತಿರದ ಲಲಿತ ಮಂದಿರ ನಿವಾಸಿ ಮುರುಗಪ್ಪ ಆಚಾರ್ಯ ಎಂಬವರ ಪಉತ್ರ ಜಯಚಂದ್ರ (66) ಎಂದು ಹೆಸರಿಸಲಾಗಿದೆ. ಈತ ಕಳೆದ 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ನ್ಯಾಯಾಲಯವು ಆರೋಪಿಗೆ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಆರೋಪಿ ದಸ್ತಗಿರಿಗೆ ಸಿಗದೆ ತಲೆಮಾರೆಸಿಕೊಂಡಿದ್ದು ಆತನ ವಿರುದ್ದ ಅಬ್ಸ್ಕಾಂಡಿಂಗ್ ಚಾರ್ಜ್ ಶೀಟ್ ಹಾಕಲಾಗಿತ್ತು.
ದಕ್ಷಿಣ ಉಪವಿಭಾಗ ಸಹಾಯಕ ಪೆÇಲೀಸ್ ಆಯುಕ್ತರು ಹಾಗೂ ಕಂಕನಾಡಿ ಪೊಲೀಸ್ ಇನ್ಸ್ ಪೆಕ್ಟರ್ ಅವರ ಮಾರ್ಗದರ್ಶನದಲ್ಲಿ ಮತ್ತು ಕಂಕನಾಡಿ ನಗರ ಠಾಣಾ ಪಿಎಸ್ಸೈ ಅವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳಾದ ಬಾಲರಾಜ್, ರವಿಕುಮಾರ್ ಅವರು ಫೆಬ್ರವರಿ 3 ರಂದು ಆರೋಪಿಯನ್ನು ಆತನ ಮನೆಯಲ್ಲಿ ದಸ್ತಗಿರಿ ಮಾಡಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.














0 comments:
Post a Comment