ಬಂಟ್ವಾಳ, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ಸಹಕಾರದೊಂದಿಗೆ ಮೇಲಂತಸ್ತಿನ ಕಟ್ಟಡ ನಿರ್ಮಾಣದ ಪ್ರಯುಕ್ತ ನಿಧಿ ಸಂಗ್ರಹಕ್ಕಾಗಿ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯ ಆಯ್ದ 32 ತಂಡಗಳ ‘ಕುಲಾಲ್ಸ್ ಟ್ರೋಫಿ-2026’ ನಿಗದಿತ ಓವರಿನ ಅಂಡರ್ ಕ್ರಿಕೆಟ್ ಪಂದ್ಯಾಟ ಫೆಬ್ರವರಿ 8 ರಂದು ಬಂಟ್ವಾಳ ಭಂಡಾರಿಬೆಟ್ಟುವಿನಲ್ಲಿರುವ ಎಸ್ ವಿ ಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ.
ಮುಂಬಯಿ ಉದ್ಯಮಿ ದಿನಕರ ಬಂಜನ್ ಮತ್ತು ಸುಚಿತ್ರಾ ದಂಪತಿಗಳು ಮತ್ತು ಬೆಂಗಳೂರು ಪ್ರಧಾನ ಮಹಾಲೇಖಪಾಲರ ಕಚೇರಿಯ ಸೀನಿಯರ್ ಎಕೌಂಟೆಂಟ್ ಶ್ರೀಮತಿ ರಶ್ಮಿತಾ ಲೋಕೇಶ್ ಅವರು ಕ್ರೀಡಾಕೂಟ ಉದ್ಘಾಟಿಸುವರು. ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸುವರು. ದ ಕ ಜಿಲ್ಲಾ ಕುಲಾಲರ ಯಾನೆ ಮೂಲ್ಯರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಂಬಯಿ ಕರ್ನಾಟಕ ಮಲ್ಲ ಪತ್ರಿಕೆಯ ಉಪಸಂಪಾದಕ ಬಿ ದಿನೇಶ್ ಕುಲಾಲ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮಹಿಳಾ ಸಂಘಟನೆಗಳ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಲ ಅನಿಲ್ ದಾಸ್ ಅತಿಥಿಗಳಾಗಿ ಭಾಗವಹಿಸುವರು.
ವಿನ್ನರ್ಸ್ ಹಾಗೂ ರನ್ನರ್ಸ್ ತಂಡಗಳಿಗೆ ನಗದು ಮತ್ತು ಕುಲಾಲ ಟ್ರೋಫಿ ಹಾಗೂ ಉತ್ತಮ ದಾಂಡಿಗ, ದಾಳಿಗಾರ, ಸವ್ಯಸಾಚಿ ಹಾಗೂ ಉತ್ತಮ ಸಂಘಟನಾ ತಂಡಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ತಿಳಿಸಿದ್ದಾರೆ.














0 comments:
Post a Comment