ಬಂಟ್ವಾಳ, ಫೆಬ್ರವರಿ 27, 2026 (ಕರಾವಳಿ ಟೈಮ್ಸ್) : ಅಲೆತ್ತೂರು ಫ್ರೆಂಡ್ಸ್ ಸರ್ಕಲ್ ಇದರ ಇದರ 27ನೇ ವರ್ಷದ ಸಾರ್ವಜನಿಕ ಶನೈಶ್ವರ ಪೂಜೆ ಹಾಗೂ 44ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಫೆಬ್ರವರಿ 28 ರಂದು ಶನಿವಾರ ನಡೆಯಲಿದೆ.
ಸಂಜೆ 5.30 ರಿಂದ ಶನಿಪೂಜೆ ಪ್ರಾರಂಭ, ರಾತ್ರಿ 7.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮ, 8.30 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ರಾತ್ರಿ 10 ಗಂಟೆಯಿಂದ ಅಮ್ಮ ಕಲಾವಿದರು ಕುಡ್ಲ ಇವರಿಂದ ತುಳು ಹಾಸ್ಯಮಯ ನಾಟಕ “ಆನ್ ಮಗೆ” ಪ್ರದರ್ಶನಗೊಳ್ಳಲಿದೆ ಎಂದು ಮಂಗಳಾ ಫ್ರೆಂಡ್ಸ್ ಪ್ರಕಟಣೆ ತಿಳಿಸಿದೆ.
















0 comments:
Post a Comment