ಬಂಟ್ವಾಳ ಪುರಸಭಾ ಕಚೇರಿಗೆ ಬೀಗ ಜಡಿದು ತೊಂದರೆ ಉಂಟು ಮಾಡಿದವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬಂಟ್ವಾಳ ಪುರಸಭಾ ಕಚೇರಿಗೆ ಬೀಗ ಜಡಿದು ತೊಂದರೆ ಉಂಟು ಮಾಡಿದವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

14 February 2026

ಬಂಟ್ವಾಳ ಪುರಸಭಾ ಕಚೇರಿಗೆ ಬೀಗ ಜಡಿದು ತೊಂದರೆ ಉಂಟು ಮಾಡಿದವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಫೆಬ್ರವರಿ 14, 2026 (ಕರಾವಳಿ ಟೈಮ್ಸ್) : ಕುಡಿಯುವ ನೀರು ಸರಬರಾಜು ಇರುವುದಿಲ್ಲ ಎಂದು ಪುರಸಭಾ ಕಚೇರಿಗೆ ಬೀಗ ಜಡಿದ ಸುಮಾರು 50 ಮಂದಿಯ ಗುಂಪಿನ ವಿರುದ್ದ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಫೆ 13 ರಂದು ಬೆಳಿಗ್ಗೆ 10.30 ರ ವೇಳೆಗೆ ಬಿ ಕಸಬಾ ಗ್ರಾಮದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಇರುವುದಿಲ್ಲವೆಂದು ಸುಮಾರು 50 ರಷ್ಟು ಸಾರ್ವಜನಿಕರು ಕಛೇರಿ ಮುಂದೆ ಗುಂಪು ಸೇರಿ ಕಚೇರಿಯ ಮುಂಭಾಗದ ದ್ವಾರದ ಬಾಗಿಲಿಗೆ ಬೀಗ ಜಡಿದು ಬಂದ್ ಮಾಡಿರುವುದರಿಂದ ಕಛೇರಿಗೆ ಬರುವ ಸಾರ್ವಜನಿಕರಿಗೂ ಹಾಗೂ ಪುರಸಭಾ ಸಿಬ್ಬಂದಿಗಳಿಗೂ ಪ್ರವೇಶ ಮಾಡದಂತೆ ತಡೆಯೊಡ್ಡಿರುತ್ತಾರೆ ಎಂದು ಮುಖ್ಯಾಧಿಕಾರಿ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 20/2026 ಕಲಂ 126(2), 132, 189(2), 191(2), 190) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭಾ ಕಚೇರಿಗೆ ಬೀಗ ಜಡಿದು ತೊಂದರೆ ಉಂಟು ಮಾಡಿದವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top