9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ನಗರ ಪೊಲೀಸರು - Karavali Times 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ನಗರ ಪೊಲೀಸರು - Karavali Times

728x90

14 February 2026

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ನಗರ ಪೊಲೀಸರು

ಪುತ್ತೂರು, ಫೆಬ್ರವರಿ 14, 2026 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ಪ್ರಕರಣಗಳಲ್ಲಿ  ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮೂಲತಃ ಪುತ್ತೂರು ಕಸಬಾ ಗ್ರಾಮದ ನಿವಾಸಿ, ಪ್ರಸ್ತುತ ಮಂಗಳೂರು ಪದವು ಎಂಬಲ್ಲಿ ವಾಸವಾಗಿರುವ ಅಬ್ಬಾಸ್ ಆಲಿ ಆಲ್ತಾಫ್ (55) ಎಂದು ಹೆಸರಿಸಲಾಗಿದೆ. ಈತನನ್ನು ಮಂಗಳೂರು, ಕುಲಶೇಖರ-ಬಿಕರ್ನಕಟ್ಟೆ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ 27 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ನ್ಯಾಯಾಲಯದಲ್ಲಿ ಷರತ್ತು ಬದ್ದ ಜಾಮೀನು ಪಡೆದು ಬಳಿಕ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ನಗರ ಪೊಲೀಸರು Rating: 5 Reviewed By: karavali Times
Scroll to Top