ಸುಳ್ಯ : ಮನೆಯಂಗಳಕ್ಕೆ ಪ್ರವೇಶಿಸಿ ಹೆಲ್ಮೆಟಿನಿಂದ ಕಾರಿನ ಗ್ಲಾಸ್ ಒಡೆದ ಮೆಸ್ಕಾಂ ಉದ್ಯೋಗಿ - Karavali Times ಸುಳ್ಯ : ಮನೆಯಂಗಳಕ್ಕೆ ಪ್ರವೇಶಿಸಿ ಹೆಲ್ಮೆಟಿನಿಂದ ಕಾರಿನ ಗ್ಲಾಸ್ ಒಡೆದ ಮೆಸ್ಕಾಂ ಉದ್ಯೋಗಿ - Karavali Times

728x90

21 February 2026

ಸುಳ್ಯ : ಮನೆಯಂಗಳಕ್ಕೆ ಪ್ರವೇಶಿಸಿ ಹೆಲ್ಮೆಟಿನಿಂದ ಕಾರಿನ ಗ್ಲಾಸ್ ಒಡೆದ ಮೆಸ್ಕಾಂ ಉದ್ಯೋಗಿ

ಸುಳ್ಯ, ಫೆಬ್ರವರಿ 21, 2026 (ಕರಾವಳಿ ಟೈಮ್ಸ್) : ಮೆಸ್ಕಾಂ ಕಚೇರಿ ಸಿಬ್ಬಂದಿ ಮನೆಯಂಗಳಕ್ಕೆ ಪ್ರವೇಶಿಸಿ ಹೆಲ್ಮೆಟಿನಿಂದ ಕಾರಿನ ಗ್ಲಾಸ್ ಹೊಡೆದು ಹಾನಿ ಮಾಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಸುಳ್ಯ ನಿವಾಸಿ ಬಾಲಚಂದ್ರ (40) ಅವರು ಪೊಲೀಸರಿಗೆ ದೂರು ನೀಡಿದ್ದು, ಫೆ 20 ರಂದು ಮಧ್ಯಾಹ್ನ, ಇವರ ಮನೆಯಲ್ಲಿ ತಂದೆ-ತಾಯಿ ಮಾತ್ರ ಇರುವ ವೇಳೆ, ಜಾಗದ ಗೇಟ್ ತರೆದು ಬೈಕಿನಲ್ಲಿ ಬಂದ ಒರ್ವ ವ್ಯಕ್ತಿ ಅಲ್ಲಿದ್ದ ಕಾರಿನ ಗ್ಲಾಸನ್ನು ಹೆಲ್ಮೆಟ್ ನಿಂದ ಹೊಡೆದು ಹಾನಿ ಮಾಡಿರುತ್ತಾರೆ. ಸದ್ರಿ ಕಾರಿನ ಗ್ಲಾಸ್ ಮೌಲ್ಯ 5 ಸಾವಿರ ರೂಪಾಯಿ ಆಗಿರುತ್ತದೆ. ಈ ಬಗ್ಗೆ ವ್ಯಕ್ತಿಯ ಬಳಿ ತಂದೆ-ತಾಯಿ ವಿಚಾರಿಸಿದಾಗ, ಆತ ಮಾಹಿತಿ ನೀಡದೆ ಇದ್ದು, ಆರೋಪಿಯು ಮೆಸ್ಕಾಂ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಪ್ರೀತ್ ಎಂಬುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಬಾಲಚಂದ್ರ ಅವರು ಫೆ 21 ರಂದು ನೀಡಿದ ದೂರಿನಂತೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಮನೆಯಂಗಳಕ್ಕೆ ಪ್ರವೇಶಿಸಿ ಹೆಲ್ಮೆಟಿನಿಂದ ಕಾರಿನ ಗ್ಲಾಸ್ ಒಡೆದ ಮೆಸ್ಕಾಂ ಉದ್ಯೋಗಿ Rating: 5 Reviewed By: karavali Times
Scroll to Top