ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಸಮಾಜ ನಿರ್ಮಾಣ ದೇಶದ ಅಭಿವೃದ್ದಿಗೆ ಪೂರಕ : ಇಬ್ರಾಹಿಂ ಗಡಿಯಾರ್ - Karavali Times ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಸಮಾಜ ನಿರ್ಮಾಣ ದೇಶದ ಅಭಿವೃದ್ದಿಗೆ ಪೂರಕ : ಇಬ್ರಾಹಿಂ ಗಡಿಯಾರ್ - Karavali Times

728x90

8 February 2026

ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಸಮಾಜ ನಿರ್ಮಾಣ ದೇಶದ ಅಭಿವೃದ್ದಿಗೆ ಪೂರಕ : ಇಬ್ರಾಹಿಂ ಗಡಿಯಾರ್

ಬಂಟ್ವಾಳ, ಫೆಬ್ರವರಿ 08, 2026 (ಕರಾವಳಿ ಟೈಮ್ಸ್) : ಸಾಮರಸ್ಯ, ಸಹಬಾಳ್ವೆಯ ಸಮಾಜ ನಿರ್ಮಾಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಕೊಡಾಜೆ ಐಕ್ಯ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಗಡಿಯಾರ್ ಗ್ರೂಪ್ ಆಫ್ ಕಂಪೆನೀಸ್ ದುಬೈ ಇದರ ಇಬ್ರಾಹಿಂ ಗಡಿಯಾರ್ ಹೇಳಿದರು. 

ಕೊಡಾಜೆ ಐಕ್ಯ ವೇದಿಕೆಯ ಕಛೇರಿಗೆ ಭೇಟಿ ನೀಡಿ ಮಾತನಾಡಿದ ಅವರು ಊರಿನಲ್ಲಿ ಯಾವುದೇ ಜಾತಿ, ಧರ್ಮ, ಮತ ಬೇಧವಿಲ್ಲದ ವಾತಾವರಣ ನಿರ್ಮಾಣ ಅತೀ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ಇದೇ ವೇಳೆ ಇಬ್ರಾಹಿಂ ಗಡಿಯಾರ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರನ್ನು ಐಕ್ಯ ವೇದಿಕೆ ವತಿಯಿಂದ ಗೌರವಿಸಲಾಯಿತು. 

ಲಯನ್ ಡಾ ಎ ಮನೋಹರ್ ರೈ ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸುವ ಸಂಘಟನೆಗಳು, ಅದಕ್ಕೆ ಸಹಕಾರ ನೀಡುವ ದಾನಿಗಳು, ಏಕತೆಯ ಭಾವನೆಯನ್ನು ಮೈಗೂಡಿಸಿಕೊಂಡವರು ಸರ್ವ ಶ್ರೇಷ್ಠರು ಎಂದರು.

ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ, ಸ್ಥಾಪಕಾಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ, ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಸಮಾಜ ನಿರ್ಮಾಣ ದೇಶದ ಅಭಿವೃದ್ದಿಗೆ ಪೂರಕ : ಇಬ್ರಾಹಿಂ ಗಡಿಯಾರ್ Rating: 5 Reviewed By: karavali Times
Scroll to Top