ಬಾಳೆಪುಣಿಯಲ್ಲಿ ಕೊಣಾಜೆ ಪೊಲೀಸರ ಕಾರ್ಯಾಚರಣೆ : ಎಂಡಿಎಂಎ ಮಾರಾಟ ಮಾಡುತ್ತಿದ್ದ ಮಂಡ್ಯ ಮೂಲದ ಆರೋಪಿ ಅರೆಸ್ಟ್ - Karavali Times ಬಾಳೆಪುಣಿಯಲ್ಲಿ ಕೊಣಾಜೆ ಪೊಲೀಸರ ಕಾರ್ಯಾಚರಣೆ : ಎಂಡಿಎಂಎ ಮಾರಾಟ ಮಾಡುತ್ತಿದ್ದ ಮಂಡ್ಯ ಮೂಲದ ಆರೋಪಿ ಅರೆಸ್ಟ್ - Karavali Times

728x90

8 February 2026

ಬಾಳೆಪುಣಿಯಲ್ಲಿ ಕೊಣಾಜೆ ಪೊಲೀಸರ ಕಾರ್ಯಾಚರಣೆ : ಎಂಡಿಎಂಎ ಮಾರಾಟ ಮಾಡುತ್ತಿದ್ದ ಮಂಡ್ಯ ಮೂಲದ ಆರೋಪಿ ಅರೆಸ್ಟ್

ಮಂಗಳೂರು, ಫೆಬ್ರವರಿ 08, 2026 (ಕರಾವಳಿ ಟೈಮ್ಸ್) : ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ಇನ್ಸ ಪೆಕ್ಟರ್ ನೇತೃತ್ವದ ಪೊಲೀಸರು ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಆಂಟಿ ಡ್ರಗ್ ಟೀಂ ಸಿಬ್ಬಂದಿಗಳು ಫೆಬ್ರವರಿ 7 ರಂದು ಉಳ್ಳಾಲ ತಾಲೂಕು, ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಾರ್ಯಗುತ್ತು ಗುಡ್ಡ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. 

ಬಂಧಿತ ಆರೋಪಿಯನ್ನು ಮೂಲತಃ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು, ಬೆಳಗೊಳ ಹೋಬಳಿ, ಹುಲಿಕೆರೆ ಎಂ ಎನ್ ಪಿ ಎಂ ಕಾಲೊನಿ ನಿವಾಸಿ ಪ್ರಸ್ತುತ ಉಳ್ಳಾಲ ತಾಲೂಕು, ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ಸೈಟ್ ಎಂಬಲ್ಲಿನ ಸೆಫಿಯಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಜೀವನ್ ಎಂಬವರ ಪುತ್ರ ಜೋರ್ಡನ್ (21) ಎಂದು ಹೆಸರಿಸಲಾಗಿದೆ. 

ಬಂಧಿತ ಆರೋಪಿಯಿಂದ 55 ಗ್ರಾಂ ಎಂಡಿಎಂಎ ಮಾದಕ ವಸ್ತು, 1 ಮೊಬೈಲ್ ಪೊನ್, ಡಿಜಿಟಲ್ ತೂಕದ ಮಾಪನ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಾಳೆಪುಣಿಯಲ್ಲಿ ಕೊಣಾಜೆ ಪೊಲೀಸರ ಕಾರ್ಯಾಚರಣೆ : ಎಂಡಿಎಂಎ ಮಾರಾಟ ಮಾಡುತ್ತಿದ್ದ ಮಂಡ್ಯ ಮೂಲದ ಆರೋಪಿ ಅರೆಸ್ಟ್ Rating: 5 Reviewed By: karavali Times
Scroll to Top